ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲಿಂಗ ಪೂಜೆಯಿಂದ ನೆಮ್ಮದಿ ಜೀವನ ಸಾಧ್ಯ: ಶ್ರೀ

Published 29 ಆಗಸ್ಟ್ 2024, 14:22 IST
Last Updated 29 ಆಗಸ್ಟ್ 2024, 14:22 IST
ಅಕ್ಷರ ಗಾತ್ರ

ಹುನಗುಂದ: ಜೀವನದುದ್ದಕ್ಕೂ ಮೌಢ್ಯಾಚರಣೆ ಜಂಜಾಟದ ಕತ್ತಲೆಯ ಒತ್ತಡಕ್ಕೆ ಒಳಗಾಗದೆ ಲಿಂಗ ಪೂಜೆಯಿಂದ ಬಸವ ಬೆಳಕಿನಲ್ಲಿ ನೆಮ್ಮದಿ ಜೀವನ ನಡೆಸಬೇಕು ಎಂದು ಚಿತ್ತರಗಿ ಸಂಸ್ಥಾನಮಠ ಇಳಕಲ್ ಗುರುಮಹಾಂತ ಸ್ವಾಮೀಜಿ ಹೇಳಿದರು.

ಇಲ್ಲಿನ ತಾಲ್ಲೂಕು ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ ಮತ್ತು ತಾಲ್ಲೂಕು ಕರ್ನಾಟಕ ಶರಣ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಶರಣಮ್ಮ ಲೆಕ್ಕಿಹಾಳ ನಿವಾಸದಲ್ಲಿ ಗುರುವಾರ ನಡೆದ 24ನೇ ಮನ ಮನೆಗಳಿಗೆ ವಚನ ಸೌರಭ ಮತ್ತು ಮಾಸಿಕ ಶರಣ ಚಿಂತನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಡವರು ಜೀವನಪೂರ್ತಿ ಸಾಲ ಮಾಡಿ ಲಕ್ಷ್ಮಿ ಪೂಜೆ ಮಾಡುವುದರಿಂದ ಹಣ ಗಳಿಕೆ ಆಗದೆ ತತ್ವ ನಿಷ್ಠ ಕಾಯಕದಿಂದ ಹಣಗಳಿಸಿ ಶ್ರೀಮಂತರಾಗಬೇಕು. ಲಿಂಗಪೂಜೆಯಿಂದ ಎಲ್ಲ ಭಾಗ್ಯ ಪಡೆಯಬಹುದು ಎಂದು ಹೇಳಿದರು.

ವಿಶ್ರಾಂತ ಶಿಕ್ಷಕ ಮಹಾಂತೇಶ ತೆನಹಳ್ಳಿ ಮಾತನಾಡಿ, ಗಳಿಸಿ ಉಳಿಸುವುದು ಹಣ ಒಂದೆ ಅಲ್ಲ. ಜ್ಞಾನ, ಆರೋಗ್ಯ, ಆಸ್ತಿ ಅಂತಸ್ತುಗಳನ್ನು ಕೊನೆ ಕಾಲದಲ್ಲಿ ಯಾರೂ ಒಯ್ಯುಯುವುದಿಲ್ಲ. ಆದರೆ ಗಳಿಸಿ ಉಳಿಸಿದ್ದನ್ನು ದಾಸೋಹಕ್ಕೆ ಬಳಸಬೇಕು ಎಂದರು.

ವಿಜಯಪುರ ಯೋಗಾಶ್ರಮದ ಸಂಗಮೇಶ್ವರ ಸ್ವಾಮೀಜಿ ಮಾತನಾಡಿದರು. ಗುರುಮಹಾಂತ ಸ್ವಾಮೀಜಿ ಸಾಮೂಹಿಕ ಲಿಂಗಧಾರಣೆ ಮಾಡಿದರು. ಶಿರೂರಿನ ಬಸವಲಿಂಗ ಸ್ವಾಮೀಜಿ, ಬಸವರಾಜ ಸ್ವಾಮೀಜಿ, ಗುತ್ತಿಗೆದಾರ ಮಲ್ಲಿಕಾರ್ಜುನ ಲೆಕ್ಕಿಹಾಳ, ಶರಣಪ್ಪ ಲೆಕ್ಕಿಹಾಳ, ಸಂಗಣ್ಣ ನಾಗರಾಳ, ಕೂಡ್ಲೆಪ್ಪನವರ, ಮಹಾಂತೇಶ ಹೊದ್ಲೂರ, ಎಸ್.ಎನ್. ಹಾದಿಮನಿ ಇದ್ದರು. ಪ್ರಭು ಮಾಲಗಿತ್ತಿಮಠ ನಿರೂಪಿಸಿ, ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT