ಮುಧೋಳ: ನಗರದ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಒಟ್ಟು 906 ದಾವೆಗಳ ಪೈಕಿ 764 ಇತ್ಯರ್ಥಗೊಂಡವು.

ಪ್ರಧಾನ ನ್ಯಾಯಾಧೀಶರಾದ ಗೀತಾಮಣಿ ಮಾತನಾಡಿ, ರಾಷ್ಟ್ರೀಯ ಲೋಕ ಅದಾಲತ್ನಿಂದ ಸಾರ್ವಜನಿಕರಿಗೆ ಹಾಗೂ ಪಕ್ಷಗಾರರಿಗೆ ಹೆಚ್ಚಿನ ಅನುಕೂಲವಾಗಿದೆ. ನ್ಯಾಯಾಲಯದ ವಕೀಲರು ಹಾಗೂ ಪಕ್ಷಗಾರರ ಸಹಕಾರದೊಂದಿಗೆ ನಡೆದ ಅದಾಲತ್ ಯಶಸ್ವಿಯಾಗಿದೆ ಎಂದು ತಿಳಿಸಿದರು.

ಹಿರಿಯ ಸೆಷನ್ಸ್ ನ್ಯಾಯಾಧೀಶರಾದ ಸಿದ್ದನಗೌಡ ಟಿ., ಅದಾಲತ್ನಲ್ಲಿ ಜನನ ನೋಂದಣಿಗೆ ಸಂಬಂಧಿಸಿದಂತೆ 200ಕ್ಕೂ ಹೆಚ್ಚು ದಾವೆಗಳು ಇತ್ಯರ್ಥಗೊಂಡಿರುವುದು ಸಂತಸ ಎಂದರು.

ಒಂದಾದ ದಂಪತಿ: ಮೂರು ವರ್ಷಗಳ ಹಿಂದೆ ಕೌಟುಂಬಿಕ ಕಲಹದಿಂದ ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದ ದಂಪತಿ ಅದಾಲತ್ನಲ್ಲಿ ರಾಜೀ ಸಂಧಾನದ ಮೂಲಕ ಒಂದುಗೂಡಿದರು. ರಾಜೇಶ ಅನವೇಕರ ದಂಪತಿ ನ್ಯಾಯಾಲಯದಲ್ಲಿ ಹಾರ ಬದಲಾಯಿಸಿಕೊಂಡು ಸಿಹಿ ಹಂಚಿದರು.

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ವಿವೇಕ ಗ್ರಾಮೋಪಾಧ್ಯ, ಸರಸ್ವತಿ ಹೊಟ್ಕರ ಸೇರಿದಂತೆ ವಕೀಲರ ಸಂಘದ ಸದಸ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.