ಕೂಡಲಸಂಗಮ (ಬಾಗಲಕೋಟೆ): ಇಲ್ಲಿನ ಪಂಚಮಸಾಲಿ ಪೀಠಕ್ಕೆ ಮಂಗಳವಾರ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೇಟಿ ನೀಡಿ, ಭಕ್ತರೊಂದಿಗೆ ಸಭೆ ನಡೆಸಿದರು. ಅವರ ಬರುವಿಕೆಗೂ ಮೊದಲೇ ಪೀಠದ ಕಟ್ಟಡದ ಗೇಟ್ ಬೀಗ ತೆರೆಯಲಾಗಿತ್ತು.

ಇದಕ್ಕೆ ಮುನ್ನ ಹುನಗುಂದದಲ್ಲಿ ಮಾತನಾಡಿದ ಅವರು, ‘ಪೀಠದ ಬಗ್ಗೆ ಅಪಪ್ರಚಾರ ನಿಲ್ಲಲಿ. ಮಠಕ್ಕೆ ಬೀಗ ಪರಿಹಾರವಲ್ಲ. ಭಕ್ತರ ಮನೆಗಳೇ ನನ್ನ ಪೀಠ. ನಾಲ್ಕು ಗೋಡೆಗಳ ಮಠ ಕಟ್ಟಿರುವೆ. ಅಲ್ಲೇ ನನ್ನ ಉಳಿವು, ಅಳಿವು. ಅಂತ್ಯವೂ ಅಲ್ಲಿಯೇ ಆಗಲಿ’ ಎಂದು ಹೇಳಿದರು.

‘ಸಮಾಜದ ಯಾವುದೇ ವ್ಯಕ್ತಿಗೆ ಅನ್ಯಾಯ ಆದರೂ ಹೋರಾಟ ಮಾಡಿದ್ದೇನೆ. ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ₹1 ಕೋಟಿ, ಸದಾನಂದಗೌಡ ₹50 ಲಕ್ಷ ನೀಡಿದ್ದಾರೆ. ಸಂಘಟನೆ ಫಲ ಅಜ್ಞಾನ ವ್ಯಕ್ತಿಗಳ ಪಾಲಾಗಬಾರದು. ದುಡಿಯುವ ಕಟ್ಟಕಡೆಯ ವ್ಯಕ್ತಿಗೆ ಸೇರಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.