ಬಾಗಲಕೋಟೆ: ತಾಲ್ಲೂಕಿನ ತುಳಸಿಗೇರಿ ಜನವರಿ 17ರಿಂದ 19ರವರೆಗೆ ಮೂರು ದಿನಗಳ ಕಾಲ ಬೆಳಗಾವಿ ವಿಭಾಗ ಮಟ್ಟದ ಮುಕ್ತ ಪ್ರೋ ಕಬಡ್ಡಿ ಹಬ್ಬಕ್ಕೆ ಸಾಕ್ಷಿಯಾಗಲಿದೆ.

ಅಲ್ಲಿನ ತುಳಸಿಗಿರೀಶ್ವರ ಸ್ಪೋರ್ಟ್ಸ್ ಕ್ಲಬ್, ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಹಾಗೂ ಕ್ರೀಡಾ ಇಲಾಖೆ ಸಹಯೋಗದಲ್ಲಿ ಸಂಘಟಿಸಿರುವ ಕಬಡ್ಡಿ ಟೂರ್ನಿಯಲ್ಲಿ ಎಂಟು ತಂಡಗಳು ಪಾಲ್ಗೊಳ್ಳಲಿವೆ. ಮೊದಲ ಬಹುಮಾನ ₹1.11,111, ಎರಡನೇ ಬಹುಮಾನ 77,777, ತೃತೀಯ ಬಹುಮಾನ ₹55,555 ಹಾಗೂ ನಾಲ್ಕನೇ ಬಹುಮಾನ ₹33,333 ಒಳಗೊಂಡಿದೆ ಎಂದು ಸ್ಫೋರ್ಟ್ಸ್ ಕಬ್ಲ್‌ನ ರಮೇಶ ಮುಗಳೊಳ್ಳಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ದೇವಸ್ಥಾನದ ಬಳಿ ಪಂದ್ಯಾವಳಿ ನಡೆಯಲಿದ್ದು, ಜನವರಿ 17ರಂದು ಮಧ್ಯಾಹ್ನ 4 ಗಂಟೆಗೆ ಗ್ರಾಮ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಮಲ್ಲೇಶ ಹ.ಒಂಟಗೋಡಿ ಉದ್ಘಾಟಿಸಲಿದ್ದಾರೆ. ಜಿಲ್ಲಾ ಪಂಚಾಯ್ತಿ ಸದಸ್ಯೆ ಶೋಭಾ ಬಿ.ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ವಕೀಲ ಸುಧೀರ್ ಉದಪುಡಿ, ಬಾಗಲಕೋಟೆ ಗ್ರಾಮೀಣ ಠಾಣೆ ಸರ್ಕಲ್ ಇನ್‌ಸ್ಪೆಕ್ಟರ್ ಪ್ರಭಾಕರ ಧರ್ಮಟ್ಟಿ, ಕಲಾದಗಿ ಪಿಎಸ್‌ಐ ರವಿ ಪವಾರ, ಆರ್‌ಟಿಒ ಆನಂದ ವಿ.ಗಾಮನಗಟ್ಟಿ, ದೈಹಿಕ ಶಿಕ್ಷಣ ಶಿಕ್ಷಕ ಸಿ.ಕೆ.ಚನ್ನಾಳ ಪಾಲ್ಗೊಳ್ಳಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮರಿಯಪ್ಪ ಹುಲ್ಲಿಕೇರಿ, ಪ್ರಹ್ಲಾದ ಸೊನ್ನದ, ಗೋಪಾಲ ದೊಡಮನಿ, ಜ್ಞಾನದೇವ ಸೊನ್ನದ, ಯಂಕಣ್ಣ ಮಾದರ, ಎಚ್.ಬಿ.ಸೊನ್ನದ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.