ರಾಂಪುರ: ಸಮೀಪದ ಬೆಣ್ಣೂರಿನಲ್ಲಿ ಜರುಗಿದ ಜೈಭೀಮ್ ಕಪ್ ಟೆನಿಸ್ ಬಾಲ್ ಕ್ರಿಕೆಟ್ ಲೀಗ್ ಪಂದ್ಯಾವಳಿಯಲ್ಲಿ ಸ್ಥಳೀಯ ಭೀಮ್ ಬಾಯ್ಸ್ ಕ್ರಿಕೆಟ್ ತಂಡ ಪ್ರಥಮ ಸ್ಥಾನ ಪಡೆದಿದೆ.

ಸ್ಥಳೀಯ ಡಾ.ಬಾಬು ಜಗಜೀವನರಾಂ ಕಲಾ ಮತ್ತು ಸಾಂಸ್ಕೃತಿಕ ಸಂಘ ಆದಿಶಕ್ತಿ ಲಕ್ಕಮ್ಮದೇವಿ ಜಾತ್ರೆ ಹಾಗೂ ದಸರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಈ ಪಂದ್ಯಾವಳಿಯಲ್ಲಿ 12 ತಂಡಗಳು ಭಾಗವಹಿಸಿದ್ದವು.

ಎರಡು ವಾರಗಳ ಕಾಲ ನಡೆದ ಲೀಗ್ ಹಂತದ ಪಂದ್ಯಾವಳಿಯಲ್ಲಿ 4 ತಂಡಗಳು ಸೆಮಿಫೈನಲ್ ಹಂತಕ್ಕೆ ಬಂದಿದ್ದು, ಭಾನುವಾರ ನಡೆದ ಅಂತಿಮ ಹಣಾಹಣಿಯಲ್ಲಿ ಸ್ಥಳೀಯ ಭೀಮ್ ಬಾಯ್ಸ್ ತಂಡ ಪ್ರಥಮ ಸ್ಥಾನ ಪಡೆದು ₹ 25 ಸಾವಿರ ನಗದು ಬಹುಮಾನ ಹಾಗೂ ಟ್ರೋಫಿ ಪಡೆಯಿತು.

ಶಿರೂರ ಕ್ರಿಕೆಟ್ ತಂಡ ದ್ವಿತೀಯ ಸ್ಥಾನ ಗಳಿಸಿ ₹ 15 ಸಾವಿರ ನಗದು ಬಹುಮಾನ ಪಡೆದರೆ, ಬೋಡನಾಯಕದಿನ್ನಿ ತಂಡ ತೃತೀಯ ಹಾಗೂ ಮುಡಪಲಜೀವಿ ತಂಡ ಚತುರ್ಥ ಸ್ಥಾನ ಗಳಿಸಿ ಬಹುಮಾನ ಹಾಗೂ ಟ್ರೋಫಿ ಪಡೆದುಕೊಂಡವು.

ಶಿರೂರ ತಂಡದ ಆಟಗಾರ ಸುಪ್ರೀತ್ ಅತ್ಯುತ್ತಮ ಬ್ಯಾಟ್ಸ್ ಮನ್ ಹಾಗೂ ಬೋಡನಾಯಕದಿನ್ನಿ ತಂಡದ ಸಿದ್ದು ಉತ್ತಮ ಬೌಲರ್ ಪ್ರಶಸ್ತಿ ಪಡೆದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ ಹಾಗೂ ಬಿಜೆಪಿ ಎಸ್.ಸಿ.ಮೋರ್ಚಾ ಜಿಲ್ಲಾ ಅಧ್ಯಕ್ಷ ಮುತ್ತಣ್ಣ ಬೆಣ್ಣೂರ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು.

ರಾಹುಲ್ ಶೆಟ್ಟರ, ವಕೀಲ ರಮೇಶ ತುಮ್ಮರಮಟ್ಟಿ,ಅನಿಲ ದೊಡಮನಿ, ಎಸ್.ಆರ್.ವಾಲೀಕಾರ, ರವಿ ರಾಂಪುರ, ಮಹಾದೇವ ಹುಂಡೇಕಾರ, ಮುತ್ತಣ್ಣ ಚಿನಗಿರಿ, ಮಹಾಂತೇಶ ತೋಟಗೇರ, ಪ್ರಶಾಂತ ಸೊನಕನಾಳ, ಶೇಖಪ್ಪ ಇಟಗಿ, ನಾಗಪ್ಪ ಮಾದರ, ಸುನೀಲ ಅಚ್ಯುತನ್, ಶಿವರಾಜ ಬೆಣ್ಣೂರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.