ಕೃಷ್ಣಾ ನದಿಯಲ್ಲಿ ಬೇಸಿಗೆ ಬೀಸಿಲಿನ ತಾಪ ತಣಿಸಿಕೊಳ್ಳುತ್ತಿರುವ ಭಕ್ತರು ಪ್ರವಾಸಿಗರು
ಪಾದಯಾತ್ರಿಗಳಿಂದ ಪುಣ್ಯಸ್ನಾನ
ಬಾಗಲಕೋಟೆಯಿಂದ ಕೂಡಲಸಂಗಮಕ್ಕೆ ಕಳಸದ ಜೊತೆಗೆ ಪಾದಯಾತ್ರೆ ಮೂಲಕ ಬಂದ ಬಹುತೇಕ ಭಕ್ತರು, ಪ್ರವಾಸಿಗರು ಮೊನಕಾಲು ಮಟ್ಟದ ಕೃಷ್ಣಾ ನದಿಯಲ್ಲಿ ಮಿಂದು ಬೇಸಿಗೆ ಬೀಸಿಲಿನ ತಾಪ ತಣಿಸಿಕೊಂಡರು, ವಿಸ್ತಾರವಾಗಿ ಹರಡಿದ್ದರು ನೀರು ಮಾತ್ರ ಮೊನಕಾಲು ಮಟ್ಟದಲ್ಲಿ ಇದೆ.ಇನ್ನೂ ಕೆಲವರು ದೇವಾಲಯ ಹೊರ ಆವರಣದ ಉದ್ಯಾನವನ ಗಿಡದ ನೆರಳನ ತೆಳಗೆ ವಿಶ್ರಾಂತಿ ಪಡೆದರು.
ಸಂಚಾರಕ್ಕೆ ತೊಂದರೆ: ಬಸವೇಶ್ವರ ವೃತ್ತದಿಂದ ಸಂಗಮೇಶ್ವರ ದೇವಾಲಯದವರೆಗೆ ಇರುವ ರಸ್ತೆಗೆ ವ್ಯಾಪಾರಿಗಳು ನುಗ್ಗಿದ್ದರಿಂದ ಭಕ್ತರು ಸಂಚರಿಸಲು ತೊಂದರೆ ಅನುಭವಿಸಿದರು. ಮಾಹಿತಿ ಕೇಂದ್ರದ ಮುಂಭಾಗದಲ್ಲಿಯೇ ಅಧಿಕ ದ್ವಿಚಕ್ರವಾಹನಗಳು ನಿಂತಿರುವುದು ಸಂಚಾರಕ್ಕೆ ತೊಂದರೆ ಉಂಟುಮಾಡಿತು. ವಾಹನಗಳಲ್ಲಿ, ಬಸ್‌ಗಳಲ್ಲಿ ಬಂದ ಭಕ್ತರನ್ನು ಪೊಲೀಸ್ ಸಿಬ್ಬಂದಿ +ಸಂಗಮೇಶ್ವರ ಪ್ರೌಢಶಾಲಾ ಪ್ರವೇಶ ದ್ವಾರಕ್ಕೆ ತಡೆದಿದ್ದರಿಂದ ಭಕ್ತರು 600 ರಿಂದ 800 ಮೀಟರ್ ಬೀಸಿಲಿನಲ್ಲಿಯೇ ನಡೆದು ಸಂಗಮನಾಥನ ದರ್ಶನ ಪಡೆದು ಜಾತ್ರೆಯಲ್ಲಿ ಪಾಲ್ಗೊಂಡರು.