ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸರ್ವರ್ ಸಮಸ್ಯೆ: ವಿವಿಧ ಪ್ರಮಾಣಪತ್ರ ಪಡೆಯಲು ಅಲೆದಾಟ

Published 22 ಜೂನ್ 2024, 16:22 IST
Last Updated 22 ಜೂನ್ 2024, 16:22 IST
ಅಕ್ಷರ ಗಾತ್ರ

ಗುಳೇದಗುಡ್ಡ: ಪಟ್ಟಣದಲ್ಲಿ ಏಳು ದಿನಗಳಿಂದ ಕಂದಾಯ ಇಲಾಖೆಯ ನಾಡಕಚೇರಿ ವೆಬ್‍ಸೈಟ್‍ಗೆ ಸರ್ವರ್ ಸಮಸ್ಯೆ ಎದುರಾಗಿದ್ದು, ಜಾತಿ, ಆದಾಯ ಪ್ರಮಾಣಪತ್ರ ಪಡೆಯಲು ಶಾಲಾ ವಿದ್ಯಾರ್ಥಿಗಳು, ಪೋಷಕರು ನಿತ್ಯವೂ ಪರದಾಡುವಂತಾಗಿದೆ.

ಆರೇಳು ದಿನ ಕಳೆದರೂ ಸರ್ವರ್ ಬರುತ್ತಿಲ್ಲ. ಶಾಲಾ ಪ್ರವೇಶಕ್ಕೆ ಕೊನೆಯ ದಿನಾಂಕ ಹತ್ತಿರವಾಗುತ್ತಿದ್ದು, ಜಾತಿ ಮತ್ತು ಆದಾಯ ಪ್ರಮಾಣಪತ್ರ ಪಡೆಯಲು ಶಾಲಾ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ.

ಕೃಷಿ ಸೇವೆಗಳಾದ ಬೋನೊಪೈಡ್, ವ್ಯವಸಾಯಗಾರರ ಪ್ರಮಾಣಪತ್ರ, ಸಣ್ಣ, ಅತಿ ಸಣ್ಣ ಹಿಡುವಳಿದಾರರ ಪ್ರಮಾಣಪತ್ರ, ಸಾಮಾಜಿಕ ಭದ್ರತಾ ಸೇವೆಗಳು ಈ ಎಲ್ಲ ಸೇವೆಗಳಿಗೆ ನಾಡಕಚೇರಿಯ ವೆಬ್‍ಸೈಟ್‍ನ್ನೇ ಅವಲಂಬಿಸಿರುವುದರಿಂದ ಸಮಸ್ಯೆ ಎದುರಾಗಿದೆ.

‘ನಾಡಕಚೇರಿಯ ವೆಬ್‍ಸೈಟ್ ಅಪ್‌ಡೇಟ್ ಮಾಡುವ ಕೆಲಸ ನಡೆಯುತ್ತಿರುವುದೇ ಸಮಸ್ಯೆಗೆ ಕಾರಣ. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೂ ತರಲಾಗಿದೆ. ಸರ್ವರ್ ಬಂದ್ ಕೂಡಲೇ ಯಾವುದೇ ಜಾತಿ ಮತ್ತು ಆದಾಯ ಪ್ರಮಾಣಪತ್ರದ ಅರ್ಜಿಗಳ ವಿಲೇವಾರಿಯನ್ನು ವಿಳಂಬ ಮಾಡುವುದಿಲ್ಲ. ಒಂದೆರೆಡು ದಿನಗಳಲ್ಲಿ ಸಮಸ್ಯೆ ಪರಿಹಾರವಾಗಲಿದೆ’ ಎಂದು ತಹಶೀಲ್ದಾರ್‌ ಮಂಗಳಾ ಎಂ. ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT