ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರಿ, ಮೇಕೆಗಳಿಗೆ ಕಾಲುಬೇನೆ ರೋಗ

ಕುಳಗೇರಿ ಕ್ರಾಸ್‌: ಭಾರಿ ನಷ್ಟ, ಆತಂಕದಲ್ಲಿ ಕುರಿಗಾಹಿಗಳು
Last Updated 24 ಅಕ್ಟೋಬರ್ 2020, 2:43 IST
ಅಕ್ಷರ ಗಾತ್ರ

ಕುಳಗೇರಿ ಕ್ರಾಸ್: ಕುಳಗೇರಿ ಹೋಬಳಿಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ನೂರಾರು ಕುಟುಂಬಗಳು ಕುರಿ ಸಾಕಣೆ ಮಾಡಿ ಜೀವನ ಸಾಗಿಸುತ್ತಿವೆ. ಕುರಿ ಮತ್ತು ಮೇಕೆಗಳಿಗೆ ಈಗ ಕಾಲುಬೇನೆ ಹಾಗೂ ಬಾಯಿಬೇನೆ ರೋಗ ಕಾಣಿಸಿಕೊಂಡಿದ್ದು, ಕುರಿಗಾಹಿ ಕುಟುಂಬಗಳು ಸಂಕಷ್ಟ ಎದುರಿಸುವಂತಾಗಿದೆ.

ಕುಳಗೇರಿ ಹೋಬಳಿಯ ಖಾನಾಪೂರ ಎಸ್.ಕೆ, ಕುಳಗೇರಿ, ಚಿರ್ಲಕೊಪ್ಪ, ಚಿಮ್ಮನಕಟ್ಟಿ, ಕಾಕನೂರ, ಸೋಮನಕೊಪ್ಪ, ತಪ್ಪಸಕಟ್ಟಿ, ಕಲ್ಲಾಪೂರ, ಮಮಟಗೇರಿ, ಹನಮಸಾಗರ, ನೀಲಗುಂದ, ತಿಮ್ಮಾಪೂರ ಎಸ್.ಎನ್, ನರಸಾಪೂರ, ವಡವಟ್ಟಿ, ಬಂಕನೇರಿ, ಬೆಳವಲಕೊಪ್ಪ, ಆಲದಕಟ್ಟಿ , ಕರಡಿಗುಡ್ಡ ಎಸ್.ಎನ್, ಕಿತ್ತಲಿ, ಸುಳ್ಳ, ಹೆಬ್ಬಳ್ಳಿ, ಕಳಸ, ಗೋವನಕೊಪ್ಪ, ಬೀರನೂರ, ತಳಕವಾಡ, ಆಲೂರು ಎಸ್.ಕೆ, ಹಾಗನೂರ ಮತ್ತು ಕರ್ಲಕೊಪ್ಪ ಗ್ರಾಮಗಳಲ್ಲಿ ಅಂದಾಜು 1,200 ಕುರಿ ಹಿಂಡಿದೆ. ಅಂದಾಜು 1.60 ಲಕ್ಷ ಕುರಿಗಳಿವೆ ಎಂದು ಸೋಮನಕೊಪ್ಪ ಗ್ರಾಮದ ಕುರಿಗಾಹಿ ರಮೇಶ ಜಂಗನ್ನವರ ತಿಳಿಸಿದರು.

ಈ ಭಾರಿ ಕುರಿ ಮತ್ತು ಮೇಕೆಗಳಿಗೆ ಕಾಲುಬೇನೆ ಹಾಗೂ ಬಾಯಿಬೇನೆ ತಗುಲಿ ಕುರಿಗಳು ಸಾವನ್ನಪ್ಪಿವೆ. ಪ್ರತಿ ಕುರಿಗಾಹಿಯ 30ರಿಂದ 40 ಕುರಿಗಳು ಮೃತಪಟ್ಟಿವೆ. ಪರಿಣಾಮ ಕುರಿಗಾಹಿಗಳ ಬದುಕು ಬಹಳ ಕಷ್ಟಕರವಾಗಿದೆ ಎಂದು ಖಾನಾಪೂರ ಎಸ್.ಕೆ ಗ್ರಾಮದ ಕುರಿಗಾರ ಮರ್ಚಪ್ಪ ಗುಳೆದಗುಡ್ಡ ತಿಳಿಸಿದರು.

ಕಳೆದ ಎರಡ್ಮೂರು ತಿಂಗಳುಗಳಿಂದ ನಿರಂತರವಾಗಿ ಮಳೆಯಲ್ಲಿ ಆಹಾರಕ್ಕಾಗಿ ಅಲೆದಾಟ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ರೋಗ ಬಂದಿದೆ. ಚಿಕಿತ್ಸೆ ಕೊಡಿಸಿದರೂ ಪ್ರಯೋಜನಾ ಆಗಿಲ್ಲ. ರೋಗ ನಿಯಂತ್ರಣಕ್ಕೆ ಬಾರದೆ ಇರುವುದಕ್ಕೆ ಕುರಿಗಾಹಿ ಕುಟುಂಬಗಳಿಗೆ ದಿಕ್ಕೆ ತೋಚದಂತಾಗಿದೆ. ಕಲಬುರ್ಗಿ, ಬೆಳಗಾವಿ, ಧಾರವಾಡ, ಹಾವೇರಿ, ರಾಯಚೂರ, ಬಳ್ಳಾರಿ, ಜಿಲ್ಲೆಗಳಿಂದ ಸಹ ಔಷಧ ತಂದು ತಿನ್ನಿಸಿದರೂ ವಾಸಿಯಾಗಿಲ್ಲ ಎಂದು ತಿಳಿಸಿದರು.

ರಾಜ್ಯ ಸರ್ಕಾರ ಸಮಸ್ಯೆಗೆ ಸ್ಪಂದಿಸಿ ಪರಿಹಾರ ನೀಡಬೇಕು ಎಂದು ಕುಳಗೇರಿ ಹೋಬಳಿಯ ಕುರಿಗಾಹಿಗಳು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT