ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೇಜು ಕಟ್ಟಡದಲ್ಲಿ ಮಾತ್ರೆ, ನ್ಯಾಪ್ಕಿನ್ಸ್ ರಾಶಿ!

Last Updated 16 ಡಿಸೆಂಬರ್ 2019, 12:37 IST
ಅಕ್ಷರ ಗಾತ್ರ

ಹುನಗುಂದ: ಶಾಲಾ ಮಕ್ಕಳ ಸದೃಢ ಆರೋಗ್ಯಕ್ಕಾಗಿ ಕೊಡಮಾಡುವ ಮಾತ್ರೆಗಳು ಇಲ್ಲಿನ ಟಿ.ಸಿ.ಎಚ್ ಕಾಲೇಜಿನ ಹಳೆಯ ಕಟ್ಟಡದ ಕೋಣೆಯಲ್ಲಿ ಮಾತ್ರೆಗಳು ಚೆಲ್ಲಾಪಿಲ್ಲಿಯಾಗಿ ಬಿದಿದ್ದು, ದೂಳು ಹಿಡಿದಿವೆ.

ಕಬ್ಬಿಣದ ಅಂಶ, ಪೇರಸ್ ಸಲ್ಫೇಟ್ ಮತ್ತು ಪ್ಲೋರಿಕ್ ಆಸಿಡ್, ವಿಟಮಿನ್ ಎ, ಜಂತುಹುಳು ಮಾತ್ರೆಗಳ ಜೊತೆಗೆ ಶಾಲೆಗಳಲ್ಲಿ ಹೆಣ್ಣುಮಕ್ಕಳಿಗೆ ವಿತರಿಸುವ ಶುಚಿ ನ್ಯಾಪ್ಕಿನ್‌ಗಳು ದೂಳು ಹಿಡಿದಿದ್ದು ಇದು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿವೆ.

ಮಾತ್ರೆಗಳ ಪೊಟ್ಟಣಗಳಲ್ಲಿ 2012, 2014, 2017ನೇ ಇಸವಿಯನ್ನು ನಮೂದಿಸಲಾಗಿದೆ. ಅವಧಿ ಮುಗಿದು ಹೋಗಿದ್ದರು ಮಾತ್ರೆಗಳನ್ನು ಇಲ್ಲಿ ತಂದು ಸುರಿದಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಈ ರೀತಿಯಾಗಿ ಮಾತ್ರೆಗಳನ್ನು ಇಟ್ಟವರು ಯಾರು ಎಂಬುವುದೇ ಯಕ್ಷ ಪ್ರಶ್ನೆಯಾಗಿದೆ.

ಪ್ರತಿ ವರ್ಷ ಅಯಾ ಶಾಲೆಗಳಿಗ ಹೋಗಿ ಮಕ್ಕಳಿಗೆ ಮಾತ್ರೆಗಳನ್ನು ವಿತರಿಸಬೇಕು. ಆದರೆ ಸಂಬಂಧಪಟ್ಟವರು ಸರಿಯಾಗಿ ಮಾತ್ರೆಗಳನ್ನು ವಿತರಿಸದೇ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಶಿಕ್ಷಕರೊಬ್ಬರು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT