ಬಾಗಲಕೋಟೆ: ನಗರದ ಶಾಲಾ–ಕಾಲೇಜುಗಳಲ್ಲಿ ಶನಿವಾರ ಶಿಕ್ಷಕರ ದಿನ ಆಚರಿಸಲಾಯಿತು.

ಶಿಕ್ಷಕರ ಅಮೂಲ್ಯವಾದ ಆಲೋಚನೆಗಳು ನಮಗೆ ಹೊಸ ಜೀವನ ಮಾರ್ಗ ತೋರಿಸುತ್ತವೆ. ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಣ ತಜ್ಞರಾಗಿ ದೇಶಕ್ಕೆ ಅತ್ಯಮೂಲ್ಯವಾದ ಕೊಡುಗೆ ನೀಡಿದ್ದಾರೆ ಎಂದು ಡಾ. ತಪಸ್ಬ್ರತ ತ್ರಿಪಾಠಿ ಹೇಳಿದರು.

ನಗರದ ಎಂ.ಆರ್.ಎನ್ ಆಯುರ್ವೇದ ಮೆಡಿಕಲ್ ಕಾಲೇಜಿನ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಧಾಕೃಷ್ಣನ್ ವಾಗ್ಮಿ, ವಿದ್ವಾಂಸ, ತತ್ವಜ್ಞಾನಿ, ಶಿಕ್ಷಣ, ರಾಜನೀತಿ ತಜ್ಞರಾಗಿದ್ದರು ಎಂದರು.

ಡಾ. ಮುರಳಿಧರ ಬಡಿಗೇರ ಮಾತನಾಡಿ, ಜ್ಞಾನವು ಶಕ್ತಿ ನೀಡುತ್ತದೆ. ರಾಧಾಕೃಷ್ಣನ್ ಅವರ ಆದರ್ಶಗಳನ್ನು ಅಳವಡಿಸಿಕೋಳ್ಳಬೇಕು ಎಂದು ಹೇಳಿದರು.

ಡೀನ್ ಡಾ.ಶಿವಕುಮಾರ್ ಗಂಗಲ್, ಪ್ರಾಚಾರ್ಯ ಡಾ. ಪ್ರಹ್ಲಾದ್ ಗಂಗಾವತಿ, ಪ್ರಾಧ್ಯಾಪಕರಾದ ದೀಪಾ ಗಂಗಲ್, ಮಹಾತೇಂಶ ಹೀರಮಠ, ಶಶಿಕಾಲ್ ಕುರಬೇಟ್, ಈಶ್ವರ ಪಾಟೀಲ್, ವೆಂಕಟೇಶ ಗೌಡರ ಭಾಗವಹಿಸಿದ್ದರು.

ನವನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು: ತಂತ್ರಜ್ಞಾನ ಕಾಲದಲ್ಲಿರುವ ಮಕ್ಕಳಿಗೆ ಸಾಮಾಜಿಕ ಮೌಲ್ಯಗಳನ್ನು ಕಲಿಸುವ ಶಿಕ್ಷಣದ ಅವಶ್ಯಕತೆ ಇದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗದ ಮುಖ್ಯಸ್ಥ ವೀರೇಶ ಬಡಿಗೇರ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಅರುಣಕುಮಾರ ಗಾಳಿ ಮಾತನಾಡಿ, ಜೀವನ ಪೂರ್ತಿ ಗುರುವಿನ ಋಣ ತಿರಿಸಲು ಸಾಧ್ಯವಿಲ್ಲ. ಶಿಕ್ಷಣ ಮಾನವನಿಗೆ ಉತ್ತಮ ಮೌಲ್ಯ, ಕೌಶಲ ಕಲಿಸುತ್ತದೆ ಎಂದರು.

ಎಸ್.ಆರ್. ನರಸಾಪೂರ ಕಲಾ ಹಾಗೂ ಎಂ.ಬಿ. ಶಿರೂರ ವಾಣಿಜ್ಯ ಕಾಲೇಜು: ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರು ಮಹತ್ವದ ಪಾತ್ರ ವಹಿಸುತ್ತಾರೆ ಎಂದು ಪ್ರಾಚಾರ್ಯ ಶ್ರೀನಿವಾಸ ನರಗುಂದ ಹೇಳಿದರು.

ವಿದ್ಯಾರ್ಥಿಗಳಾದ ಎಸ್.ಎಂ.ಜಲಗೇರಿ, ಎಸ್.ಟಿ.ನಿಂಬಲಗುಂದಿ, ಪಿ.ಎಸ್.ಸಂಗಮದ, ಎಸ್.ಬಿ.ಲಮಾಣಿ, ಎಸ್.ಎಸ್.ಬಾಸುತ್ಕರ್, ಕೆ.ಜಿ.ಲಮಾಣಿ, ಮಂಜುಳಾ ಗೌಡರ ಮಾತನಾಡಿದರು.

ಎಸ್.ಎಸ್.ಹಂಗರಗಿ, ಎನ್ಎಸ್ಎಸ್ ಅಧಿಕಾರಿಗಳಾದ ಎಸ್.ವೈ. ಬೊಮ್ಮಣ್ಣವರ, ಎಸ್.ಎಂ ಹಡಪದ ಉಪಸ್ಥಿತರಿದ್ದರು.

ಅಕ್ಕಮಹಾದೇವಿ ಮಹಿಳಾ ಕಲಾ, ವಿಜ್ಞಾನ, ವಾಣಿಜ್ಯ ಕಾಲೇಜು: ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅಧ್ಯಯನದ ಜೊತೆಗೆ ಬದುಕಿನ ನೈತಿಕ ಮೌಲ್ಯಗಳಿಂದ ದೇಶದ ಉತ್ತಮ ಪ್ರಜೆಯನ್ನಾಗಿಸುವ ಕರ್ತವ್ಯ ಶಿಕ್ಷಕರದು ಎಂದು ಪ್ರಾಚಾರ್ಯ ಎಸ್.ಎಂ. ಒಡೆಯರ ಹೇಳಿದರು.

ಜಿ.ಐ. ನಂದಿಕೋಲಮಠ ಮಾತನಾಡಿದರು. ಎನ್.ಎಸ್.ಎಸ್. ಅಧಿಕಾರಿ ಎಂ.ವಿ. ಭಾಜಪ್ಪನವರ್, ಎ.ಆರ್. ಬಡಿಗೇರ, ಪೂಜಾ ಅರ್ಕಸಾಲಿ ಇದ್ದರು.

ವಿದ್ಯಾಗಿರಿಯ ಸೆಂಟ್ ಆನ್ಸ್ ಕಾನ್ವೆಂಟ್ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜು: ಪ್ರಾಚಾರ್ಯರಾದ ಸಿಸ್ಟರ್ ಮೇರಿ ಜಾಕೋಬ್, ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿದರು.

ಶಿಕ್ಷಕರಾದ ಸಿದ್ದಯ್ಯ ಹಿರೇಮಠ, ಶ್ವೇತಾ ಮಿರ್ಜಿ, ಶೀಲಾ ಹದ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.