ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ತಂತಿ ಸ್ಪರ್ಶ: ಎಮ್ಮೆ ಸಾವು

Published 21 ಏಪ್ರಿಲ್ 2024, 15:09 IST
Last Updated 21 ಏಪ್ರಿಲ್ 2024, 15:09 IST
ಅಕ್ಷರ ಗಾತ್ರ

ಗುಳೇದಗುಡ್ಡ: ಪಟ್ಟಣದ ಬಾಗಲಕೋಟೆ ರಸ್ತೆಯ ಚೆಕ್ ಪೋಸ್ಟ್ ಹಿಂದಿನ ಕುರಹಟ್ಟಿ ಅವರ ಹೊಲದಲ್ಲಿ ಶನಿವಾರ ಸಂಜೆ ವಿದ್ಯುತ್ ತಂತಿ ಹರಿದು ಬಿದ್ದು ಎಮ್ಮೆಯೊಂದು ಮೃತಪಟ್ಟಿದೆ.

ರೇಣವ್ವ ವಾಲೀಕಾರ ಅವರ ಮಗ ಎಮ್ಮೆಯನ್ನು ಮೇಯಿಸಲು ಹೊಲದಲ್ಲಿ ಹಾದು ಹೋಗುವಾಗ ಹೊಲದಲ್ಲಿಯ ವಿದ್ಯುತ್ ತಂತಿ ಹರಿದು ಎಮ್ಮೆಯ ಮೇಲೆ ಬಿತ್ತು. ಆತ ಜನರನ್ನು ಕರೆದುಕೊಂಡು ಬರುವುದರಲ್ಲಿಯೇ, ಸ್ಥಳದಲ್ಲಿಯೇ ಎಮ್ಮೆ ಮೃತಪಟ್ಟಿದೆ.

ಸೂಕ್ತ ಪರಿಹಾರ ನೀಡಬೇಕೆಂದು ರೇಣವ್ವ ವಾಲೀಕಾರ ಒತ್ತಾಯಿಸಿದ್ದಾರೆ. ‘ಪಶುವೈದ್ಯಕೀಯ ಇಲಾಖೆಯಿಂದ ಪಂಚನಾಮೆಯ ವರದಿಯ ಜೊತೆ ಪೊಲೀಸ್‌ ಇಲಾಖೆಯ ವರದಿ ಆಧರಿಸಿ ಪರಿಹಾರ ನೀಡಲಾಗುವುದು’ ಎಂದು ಹೆಸ್ಕಾಂ ಅಧಿಕಾರಿ ಬಸವರಾಜ ಬಿದರಿಕರ ಕಲಾಲ ತಿಳಿಸಿದ್ದಾರೆ.

ಸ್ಥಳಕ್ಕೆ ಪೊಲೀಸ್ ಅಧಿಕಾರಿ, ಪಿಎಸ್ಐ ಲಕ್ಷ್ಮಣ ಎಂ. ಆರಿ, ಮುಖ್ಯ ಪಶು ವೈದ್ಯಾಧಿಕಾರಿ ಡಾ.ಸುರೇಶ ಜಾಧವ್, ಪಶುವೈದ್ಯಕೀಯ ಪರೀವಿಕ್ಷಕ ಎಸ್.ಜಿ. ಸುರಗಿಮಠ, ಹೆಸ್ಕಾಂ ಶಾಖಾಧಿಕಾರಿ ಶ್ರೀಧರ ಮಾಲಗಿತ್ತಿ, ಪೊಲೀಸ್ ಇಲಾಖೆಯ ಸಿಬ್ಬಂದಿ ಅಶೋಕ ಜಿಂಗಿ, ಆನಂದ ಬಿಂಜವಾಡಗಿ, ಮಾರುತಿ ಆಸಂಗಿ ಪರಿಶೀಲನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT