ಮಹಾಲಿಂಗಪುರ: ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಜರುಗಿದ ಮಮದಾಪುರ ಅವರ ಮದುವೆ ಸಮಾರಂಭದಲ್ಲಿ ಪುರಸಭೆ ಹಾಗೂ ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ನವ ವಧು–ವರರಿಗೆ ಮತದಾನ ಜಾಗೃತಿ ಮೂಡಿಸಲಾಯಿತು.

ಮತದಾರರ ಜಾಗೃತಿ ಕರಪತ್ರಗಳನ್ನು ವಧು-ವರರಿಗೆ ನೀಡುವುದರೊಂದಿಗೆ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಮತದಾರರಿಗೆ ಮೇ 10 ರಂದು ಜರುಗುವ ಮತದಾನ ದಿನ ತಪ್ಪದೇ ಮತದಾನ ಮಾಡುವಂತೆ ತಿಳಿಸಲಾಯಿತು. ಮತದಾನ ಸಂದರ್ಭ ತೆಗೆದುಕೊಂಡ ಹೋಗಬೇಕಾದ ದಾಖಲೆಗಳು, ಸಹಾಯವಾಣಿ, ದೂರು ನಿರ್ವಹಣಾ ಸಂಖ್ಯೆ, ವಿ-ವಿಜಿಲ್ ಸೇರಿದಂತೆ ವಿವಿಧ ವಿಷಯಗಳ ಕುರಿತು ಮತದಾರರಿಗೆ ಹೇಳಲಾಯಿತು.

ಪುರಸಭೆ ಮುಖ್ಯಾಧಿಕಾರಿ ಜಗದೀಶ್ ಈಟಿ, ಚುನಾವಣೆ ಸೆಕ್ಟರ್ ಅಧಿಕಾರಿಗಳಾದ ರಾಜಕುಮಾರ ಸರಿಕರ, ಎನ್.ಎ.ಲಮಾಣಿ, ಸಿ.ಎಸ್.ಮಠಪತಿ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.