ಶನಿವಾರ, ಏಪ್ರಿಲ್ 4, 2020
19 °C

ವಿಶ್ವ ಮಹಿಳಾ ದಿನಕ್ಕೆ ನಳ ಮಹಾರಾಜರಿಂದ ಮುನ್ನುಡಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ವಿಶ್ವ ಮಹಿಳಾ ದಿನಕ್ಕೆ ಮುನ್ನುಡಿ ಬರೆಯಲು ಇಲ್ಲಿನ ಜಿಲ್ಲಾ ಪಂಚಾಯ್ತಿ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಪುರುಷರ ಅಡಿಗೆ ಸ್ಪರ್ಧೆಯಲ್ಲಿ ನಳ ಮಹಾರಾಜರು ಗಮ್ಮತ್ತು ಮೆರೆದರು.

ಪಾತ್ರೆ ತೊಳೆದುಕೊಂಡು, ಸ್ಟೋವ್ ಹಚ್ಚಿಕೊಂಡು ಕಣ್ಣಲ್ಲಿ ನೀರು ಸುರಿಸಿಕೊಳ್ಳುತ್ತಾ ಈರುಳ್ಳಿ ಸೇರಿದಂತೆ ಬೇರೆ ಬೇರೆ ತರಕಾರಿ ಹೆಚ್ಚಿಕೊಂಡು ಇಂಗು-ತೆಂಗಿನ ವಗ್ಗರಣೆ ಹಾಕಿದರು. ಹಿಟ್ಟು ಕಲಸಿದರು. ಕುಕ್ಕರ್ ಕೂಗಿಸಿ ವಿವಿಧ ಬಾತ್ ಗಳನ್ನು ಮಾಡಿದರು.

ಅಡುಗೆ ಮಾಡಲು ಒಂದು ತಾಸು ಸಮಯ ನಿಗದಿಗೊಳಿಸಲಾಗಿತ್ತು. ಹೋಳಿಗೆ ಕಡುಬು,  ಉಪ್ಪಿಟ್ಟು, ಜಾಮೂನು, ಕಟ್ಲೆಟ್, ಈರುಳ್ಳಿ ಬಜಿ, ಮೈಸೂರು ಬಜಿ, ಫ್ರೈಡ್ ರೈಸ್, ಶಾವಿಗೆ ಪಾಯಸ, ಎಗ್ ಪುಲಾವ್ ಹೀಗೆ ಬಾಯಲ್ಲಿ ನೀರೂರಿಸುವ ವೈವಿಧ್ಯಮಯ ಖಾದ್ಯಗಳನ್ನು ಮಾಡಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಂಗೂಬಾಯಿ ಮಾನಕರ ಅಡುಗೆ ಸ್ಪರ್ಧೆಗೆ ಚಾಲನೆ ನೀಡಿದರು.

ಮಹಿಳಾ ಮತ್ತು ಮಕ್ಜಳ ಅಭಿವೃದ್ಧಿ ಇಲಾಖೆಯ ಸಿಡಿಪಿಒಗಳಾದ ಅನ್ನಪೂರ್ಣ ಕುಬಕಟ್ಟಿ, ಮೌನೇಶ್ವರಿ ಹಾಗೂ ಹೇಮಾವತಿ ತೀರ್ಪುಗಾರರಾಗಿ ಕೆಲಸ ಮಾಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು