ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವುಶು ಚಾಂಪಿಯನ್‌ಷಿಪ್‌: ಮೂರನೇ ದಿನವೂ ತಮಿಳುನಾಡಿಗೆ ಮುನ್ನಡೆ

Published 13 ಜೂನ್ 2024, 4:13 IST
Last Updated 13 ಜೂನ್ 2024, 4:13 IST
ಅಕ್ಷರ ಗಾತ್ರ

ಬಾಗಲಕೋಟೆ: ರಾಷ್ಟ್ರೀಯ, ರಾಜ್ಯ ವುಶು ಸಂಸ್ಥೆ ವತಿಯಿಂದ ಇಲ್ಲಿನ ಬಿವಿವಿ ಸಂಘದಲ್ಲಿ ಹಮ್ಮಿಕೊಂ‌ಡಿರುವ ದಕ್ಷಿಣ ಭಾರತದ ಖೇಲೊ ಇಂಡಿಯಾ ಸಬ್ ಜೂನಿಯರ್‌, ಜೂನಿಯರ್ ಹಾಗೂ ಸೀನಿಯರ್ ಮಹಿಳಾ ವುಶು ಚಾಂಪಿಯನ್‌ಷಿಪ್‌ನ ಮೂರನೇ ದಿನ ಬುಧವಾರ ತಮಿಳುನಾಡಿನ ಕ್ರೀಡಾಪಟುಗಳು ಮುನ್ನಡೆ ಸಾಧಿಸಿದರು.

ಜೂನಿಯರ್‌ ಹಾಗೂ ಸೀನಿಯರ್ ವಿಭಾಗದಲ್ಲಿ ತಮಿಳುನಾಡು ಕ್ರೀಡಾಪಟುಗಳು 7 ಚಿನ್ನ, ಓಡಿಶಾ 3, ಕೆರಳ 3, ತೆಲಂಗಾಣ ಒಂದು ಚಿನ್ನ ಪಡೆದರೆ, ಕರ್ನಾಟಕದ ಕ್ರೀಡಾಪಟುಗಳು 6 ಬೆಳ್ಳಿ 13 ಕಂಚು ಗೆದ್ದರು.

ಸೀನಿಯರ್ ವಿಭಾಗ
ಚಾಂಗ್‌ಕೌನ್ ವಿಭಾಗ: ಕೌಶಿಕಾ ರೌಟ್ರೇ(ಓಡಿಶಾ, ಚಿನ್ನ), ಸಂಜನಾ ಹಂಚಿನಮನಿ (ಕರ್ನಾಟಕ, ಬೆಳ್ಳಿ), ರೇಣುಶ್ರೀ ನಂದಿನಿ (ಕರ್ನಾಟಕ) ಹಾಗೂ ಪ್ರತಿಕ್ಷಾ ಹಿರೇಮಠ(ಕರ್ನಾಟಕ ಕಂಚು).
ನಾಂಕೌನ್ ವಿಭಾಗ: ಗೋಪಿಕಾ ವಿ.ಪಿ(ಕೇರಳ ಚಿನ್ನ), ಕೊಟ್ಟಳ ಪೂಜಿತಾ ಶ್ರುತಿ (ಆಂಧ್ರಪ್ರದೇಶ, ಬೆಳ್ಳಿ), ಒಡಲಕೊಂಡ ಭಾರತಿ (ತೆಲಂಗಾಣ) ಹಾಗೂ ಗೌರಿ ಹಿರೇಮಠ (ಕರ್ನಾಟಕ ಕಂಚು).
ತೈಜಿಕೌನ್ ವಿಭಾಗ: ನಿರಂಜನಾ ಪಿ (ಕೇರಳ ಚಿನ್ನ), ಪಂಚಮಿ ಸಿಂಗ್ ( ಓಡಿಶಾ, ಬೆಳ್ಳಿ), ರಾಣಿ ಲಾಯದಗುಂದಿ (ಕರ್ನಾಟಕ) ಹಾಗೂ ಒರಿಗೆಲಾ ಅನಿತಾ( ತೆಲಂಗಾಣ ಕಂಚು).

ಬಾಗುವಾಝಾಂಗ್ ವಿಭಾಗ: ಜ್ಯೋತ್ಸ್ನಾರಾಣಿ ಜೆನಾ (ಓಡಿಶಾ, ಚಿನ್ನ), ಎಸ್.ಸುವಶ್ರೀ (ತಮಿಳುನಾಡು,ಬೆಳ್ಳಿ), ಪವಿತ್ರಾ ಭೂತಾಳಿ (ಕರ್ನಾಟಕ) ಹಾಗೂ ಜಿತಿಕಾಪ್ರೇಮ ಪಿ.ಕೆ(ಕೇರಳ ಕಂಚು).
ಜಿಯಾನ್ಷು ವಿಭಾಗ: ಜ್ಯೋತ್ಸ್ನಾರಾಣಿ ಮುದುಳಿ (ಓಡಿಶಾ, ಚಿನ್ನ), ಸೌಜನ್ಯ ಲಾಯದಗುಂದಿ (ಕರ್ನಾಟಕ, ಬೆಳ್ಳಿ), ರುಕ್ಮುಣಿ ಮುರಕಾಚೆಟ್ಟಿ (ಕರ್ನಾಟಕ) ಹಾಗೂ ಎಲ್‌. ರಾಜಶ್ರೀ(ತೆಲಂಗಾಣ, ಕಂಚು).

ತೈಜಿಕೌನ್ ವಿಭಾಗ: ಒಡೆಪಲ್ಲೇ ನವೀನಾ (ತೆಲಂಗಾಣ,ಚಿನ್ನ), ಅಕ್ಷತಾ ಪಾಟೀಲ (ಕರ್ನಾಟಕ,ಬೆಳ್ಳಿ), ತನ್ಯ ಶ್ರೀವಾಸ್ತವ (ಓಡಿಶಾ) ಹಾಗೂ ಅನುಪಮ ಮೇಲಿನಮನಿ (ಕರ್ನಾಟಕ,ಕಂಚು).
ಕಿಯಾನ್ಷು ವಿಭಾಗ: ಪಿ.ಎ.ಶ್ರೀಯಾ (ತಮಿಳುನಾಡು,ಚಿನ್ನ), ಸಹನಾ ಕೊಣ್ಣುರ (ಕರ್ನಾಟಕ, ಬೆಳ್ಳಿ), ಮಲ್ಲರಮ್ ಕವಿತಾ (ತೆಲಂಗಾಣ) ಹಾಗೂ ರೀತಾ ಸೆಥಿ (ಓಡಿಶಾ, ಕಂಚು).

ಜೂನಿಯರ್ ವಿಭಾಗ
ಚಾಂಗ್‌ಕೌನ್ ವಿಭಾಗ: ಡಿ.ಬಾಲಹರ್ಷಿಣಿ (ತಮಿಳುನಾಡು ಚಿನ್ನ), ಗೌರಿ ನಂದನ ಎನ್.ಪಿ(ಕೇರಳ, ಬೆಳ್ಳಿ), ಶ್ರೀನಂದಾ ಎಸ್,(ಕೇರಳ) ಹಾಗೂ ದಿಬ್ಯಕಾಂತಿ ಓರಂ (ತಮಿಳುನಾಡು, ಕಂಚು).
ಜಿಯಾನ್ಷು ವಿಭಾಗ: ಲಕ್ಷ್ಮೀಪ್ರಭಾ ಎಸ್(ತಮಿಳುನಾಡು,ಚಿನ್ನ), ಪಾರಿಯಾ ಖಾನಂ (ತೆಲಂಗಾಣ,ಬೆಳ್ಳಿ), ಎಸ್.ಇಸ್ಸಿತಾ (ತಮಿಳುನಾಡು) ಹಾಗೂ ಮಮಲಿ ಜೆನಾ (ಓಡಿಶಾ, ಕಂಚು).
ಕಿಯಾನ್ಷು ವಿಭಾಗ: ಮಿಸ್ಸಬಾ ಪಾಥಿಮಾ ಎ.ಆರ್ (ತಮಿಳುನಾಡು,ಚಿನ್ನ), ಖುಷಿ ವರ್ಮಾ (ಕರ್ನಾಟಕ, ಬೆಳ್ಳಿ), ಜಿ,ಪೂಜಿತಾ (ತೆಲಂಗಾಣ) ಹಾಗೂ ಈಶ್ವರಿ ಬೀಳಗಿ (ಕರ್ನಾಟಕ, ಕಂಚು).
ನಾಂಕೌನ್ ವಿಭಾಗ: ಶ್ರೀಲಿನಾ ಎಂ (ತಮಿಳುನಾಡು, ಚಿನ್ನ), ನೂಪುರ ಪಟ್ನಾಯಿಕ್ (ಓಡಿಶಾ ಬೆಳ್ಳಿ), ಅಪರ್ಣಾ ಎ (ಕೇರಳ) ಹಾಗೂ ಥರಿಣಿತಾ ಡಿ (ತಮಿಳುನಾಡು, ಕಂಚು).

ತೈಜಿಕೌನ್ ವಿಭಾಗ: ಎಂ.ಭವತರಾಣಿ (ತಮಿಳುನಾಡು, ಚಿನ್ನ), ಪಾಯಲ್ ಪಟ್ನಾಯಕ ( ಓಡಿಶಾ, ಬೆಳ್ಳಿ), ಮಹೇಕ್ ಜಬೀನ ನದಾಫ (ಕರ್ನಾಟಕ) ಹಾಗೂ ಸವಿತಾ ಹುಬ್ಬಳ್ಳಿ (ಕರ್ನಾಟಕ, ಕಂಚು).

ವುಶು ಚಾಂಪಿಯನ್‌ಷಿಪ್‌ನಲ್ಲಿ ಸೆಣಸುತ್ತಿರುವ ಕ್ರೀಡಾಪಟುಗಳು
ವುಶು ಚಾಂಪಿಯನ್‌ಷಿಪ್‌ನಲ್ಲಿ ಸೆಣಸುತ್ತಿರುವ ಕ್ರೀಡಾಪಟುಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT