ಸಂಡೂರು: ತಾಲ್ಲೂಕಿನಾದ್ಯಂತ ‘ಮದ್ರಾಸ್ ಐ’ ಕಣ್ಣು ಸೋಂಕು ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಈ ವರೆಗೆ ಸುಮಾರು 175 ಸೋಂಕಿತರು ತಾಲ್ಲೂಕಿನ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ತಾಲ್ಲೂಕು ವೈದ್ಯಾಧಿಕಾರಿ ಭರತ್, ‘ಎಲ್ಲ ವಯಸ್ಸಿನವರಲ್ಲೂ ಕಂಡುಬರುವ ಈ ಸೋಂಕು ಹೆಚ್ಚಾಗಿ ಮಕ್ಕಳನ್ನು ಬಾಧಿಸುತ್ತಿದೆ. ಪಟ್ಟಣದ ಕೆಲ ಖಾಸಗಿ ಶಾಲೆಗಳ ಮಕ್ಕಳನ್ನು ಬಾಧಿಸಿದ ಹಿನ್ನೆಲೆಯಲ್ಲಿ ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ಒದಗಿಸಲಾಗಿದೆ’ ಎಂದರು.
‘ಕಣ್ಣು ನೋವು ಬರುವುದು, ಕಣ್ಣು ಮಬ್ಬಾಗುವುದು, ಕೆಂಪಗಾಗುವುದು, ಊತ, ಪಿಚ್ಚುಗಟ್ಟುವಿಕೆ ಇದರ ಲಕ್ಷಣಗಳಾಗಿದ್ದು ಕೆಲ ಮುಂಜಾಗ್ರತೆಗಳನ್ನು ವಹಿಸುವ ಮೂಲಕ ಸಮಸ್ಯೆಗೆ ಪರಿಹಾರ ಹುಡುಕಬಹುದು. ಸೋಂಕಿಗೆ ಒಳಗಾದ ವ್ಯಕ್ತಿ ಕಣ್ಣನ್ನು ಕೈಯಿಂದ ಮುಟ್ಟಬಾರದ. ಕನ್ನಡಕ ಹಾಕಬೇಕು. ಆಗಾಗ್ಗೆ ಕೈ ತೊಳೆಯಬೇಕು. ಹೊರಗಡೆ ಓಡಾಡಬಾರದು. ವೈದ್ಯರ ಸಲಹೆ ಪಡೆಯಬೇಕು’ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.