ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಗರಿಬೊಮ್ಮನಹಳ್ಳಿ: ವಿದ್ಯುತ್‌ ಸ್ಪರ್ಶದಿಂದ 4 ರಾಜಹಂಸಗಳ ಸಾವು

Published 11 ಏಪ್ರಿಲ್ 2024, 21:52 IST
Last Updated 11 ಏಪ್ರಿಲ್ 2024, 21:52 IST
ಅಕ್ಷರ ಗಾತ್ರ

ಹಗರಿಬೊಮ್ಮನಹಳ್ಳಿ (ಬಳ್ಳಾರಿ ಜಿಲ್ಲೆ): ತಾಲ್ಲೂಕಿನ ಬಾಚಿಗೊಂಡನಹಳ್ಳಿ ಬಳಿ ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿ ಹಾದು ಹೋದ ಕೂಡಗಿ ಉಷ್ಣ ವಿದ್ಯುತ್ ಸ್ಥಾವರದ ವಿದ್ಯುತ್ ಸ್ಪರ್ಶದಿಂದ ನಾಲ್ಕು ರಾಜಹಂಸ ಪಕ್ಷಿಗಳು (ಗ್ರೇಟ್ ಫ್ಲೆಮಿಂಗೊ) ಗುರುವಾರ ಸಾವನ್ನಪ್ಪಿವೆ.

ಪ್ರತಿ ವರ್ಷ ಹಕ್ಕಿಗಳ ವಲಸೆ ಸಂದರ್ಭದಲ್ಲಿ ಈ ಅವಘಡ ಸಂಭವಿಸುತ್ತದೆ. ಬಾನಾಡಿಗಳು ಆಹಾರ ಅರಸಿ ತುಂಗಭದ್ರಾ ಹಿನ್ನೀರು ಪ್ರದೇಶಕ್ಕೆ ತಂಡೋಪತಂಡವಾಗಿ ಬರುತ್ತಿವೆ. ಆದರೆ, ಬರುವ ಧಾವಂತದಲ್ಲಿ ಹೈಟೆನ್ಷನ್ ಲೈನ್‍ ಮೂಲಕ ಹಾದು ಹೋಗುವ ಹಕ್ಕಿಗಳು ವಿದ್ಯುತ್ ಶಾಕ್‍ನಿಂದಾಗಿ ಪ್ರಾಣಬಿಡುತ್ತಿವೆ.

‘ಪಕ್ಷಿಗಳಿಗೆ ತೊಂದರೆ ಆಗದಂತೆ ವೈಜ್ಞಾನಿಕವಾಗಿ ವಿದ್ಯುತ್ ಲೈನ್‍ಗಳಿಗೆ ಬೆಳಕಿನ ಫಲಕ (ರಿಫ್ಲೆಕ್ಟರ್) ಅಳವಡಿಸಬೇಕು. ಇದರಿಂದ ಅವಘಡ ತಪ್ಪಿಸಬಹುದು. ಕಳೆದ ನವೆಂಬರ್ ತಿಂಗಳಲ್ಲಿ 20ಕ್ಕೂ ಹೆಚ್ಚು ಪಕ್ಷಿಗಳು ಒಂದು ವಾರದಲ್ಲಿ ಸಾವನ್ನಪ್ಪಿದ್ದವು‘ ಎಂದು ಪಕ್ಷಿ ಪ್ರೇಮಿ ಮಹೇಶ್ವರ ಹುರುಕಡ್ಲಿ ತಿಳಿಸಿದ್ದಾರೆ.

ವಿದ್ಯುತ್ ತಂತಿಗಳಿಗೆ ತಗುಲಿ ರಾಜಹಂಸ(ಗ್ರೇಟ್ ಫ್ಲೆಮಿಂಗೊ) ಪಕ್ಷಿಗಳು ಸಾವನ್ನಪ್ಪಿರುವುದು
ವಿದ್ಯುತ್ ತಂತಿಗಳಿಗೆ ತಗುಲಿ ರಾಜಹಂಸ(ಗ್ರೇಟ್ ಫ್ಲೆಮಿಂಗೊ) ಪಕ್ಷಿಗಳು ಸಾವನ್ನಪ್ಪಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT