ಸಿರುಗುಪ್ಪ: ನಗರದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಶಾಸಕ ಬಿ.ಎಂ.ನಾಗರಾಜ ಅವರ ನೇತೃತ್ವದಲ್ಲಿ 2ನೇ ತ್ರೈಮಾಸಿಕ ಸಭೆ ಶುಕ್ರವಾರ ನಡೆಯಿತು.

ಶಾಸಕ ಮಾತನಾಡಿ ಜೋಳ ಮಾರಾಟ ನೋಂದಣಿ ಒಂದು ಕಡೆ ಮಾರಾಟ ಮತ್ತೊಂದು ಕಡೆ ಇದನ್ನು ತಡೆಯಬೇಕು, ಎಲ್ಲಿ ನೋಂದಾಣಿ ಮಾಡಿರುತ್ತಾರೆ ಅಲ್ಲಿಯೇ ಮಾರಾಟ ಮಾಡಲು ರೈತರಿಗೆ ತಿಳಿಸಿ. ಸರ್ಕಾರದ ಗೋದಮಗಳನ್ನು ಬಳಸಿಕೊಂಡು ಯಾವುದೇ ತೊಂದರೆ ಆಗದಂತೆ ಸೂಕ್ತ ಕ್ರಮ ತೆಗೆದುಕೊಳ್ಳ ಬೇಕು. ಮಧ್ಯವರ್ತಿಗಳ ಹಾವಳಿ ತಡೆದು, ಯಾವುದೇ ಪ್ರತಿಭಟನೆ ಮಾಡಲು ಅವಕಾಶ ನೀಡಬಾರದು. ಇಲ್ಲವಾದರೆ ನಿಮ್ಮ ವಿರುದ್ಧದ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆಹಾರ ಇಲಾಖೆಯ ಅಧಿಕಾರಿಗೆ ಸೂಚಿಸಿದರು.

ರೈತರಿಗೆ ಅವಶ್ಯಕ ಇರುವ ಬೀಜಗಳನ್ನು ಪೂರೈಯಿಸಬೇಕು,ಮಣ್ಣೂರು ಭಾಗದಲ್ಲಿ ಬೇರೆ ಬೇರೆ ಕಂಪನಿಯವರು ಬಂದು ಪುಂಡೆ ಬೀಜ ಕೊಟ್ಟು ನಾವೇ ಖರೀದಿ ಮಾಡುತ್ತೆವೆ ಎಂದು ರೈತರಿಗೆ ಹೇಳುತ್ತಿದ್ದಾರೆ. ಇವರು ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ಅನುಮತಿ ಪಡೆಯದೆ ಮಾರಾಟ ಮಾಡುವ ಕಂಪನಿಗಳ ವಿರುದ್ದ ಕ್ರಮಕೈಗೊಳ್ಳಿ. ರೈತರ ಬೇಡಿಕೆಗೆ ಅನುಗುಣವಾಗಿ ಡಿಯಾಚ, ಸೇಣಬು ಬೀಜಗಳನ್ನು ನೀಡಿ, ಪರ್ಯಾಯ ಬೆಳೆಗಳ ಕುರಿತು ಜಾಗೃತಿ ಜಾಥಗಳ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹೆಚ್ಚು ಪ್ರಚಾರ ಮಾಡಿ. ಸೀರಿಗೇರಿ ಮತ್ತು ತೆಕ್ಕಲಕೋಟೆ ಎಪಿಎಂಸಿ ಪಾಳು ಬಿದ್ದಿದೆ. ಹಚ್ಚೋಳ್ಳಿ ಗೋದಾಮಿ ನಿರ್ವಹಣೆ ಸರಿಯಾಗಿಲ್ಲ. ಸಿರಿಗೇರಿ ಕ್ರಾಸ್ ನಲ್ಲಿ ಕುರಿ ಮಾರುಕಟ್ಟೆ ಖಾಸಗಿಯವರು ಮಾಡುತ್ತಿದ್ದಾರೆ. ಇದರ ಬದಲಿಗೆ ತೆಕ್ಕಲಕೋಟೆ ಎಪಿಎಂಸಿಯಲ್ಲಿ ಕುರಿ ಮಾರುಕಟ್ಟೆ ಮಾಡಲು ಕ್ರಮಕೈಗೊಳ್ಳಿ. ವಾಲ್ಮೀಕಿ ವಸತಿಯುತ ಶಾಲೆಯ ಕಟ್ಟಡ ನಿರ್ಮಾಣ ಕಾರ್ಯಕ್ಕೆ ನಕ್ಷೆ ನೀಡಿ.ತಾಳೂರು ಮತ್ತು ರಾವಿಹಾಳ ಗ್ರಾಮದಲ್ಲಿ ಪೊಲೀಸ್ ಬಂದೊಬಸ್ತನಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಿ ಎಂದರು.

ಸಮೀಕ್ಷೆಯ ವರದಿಯನ್ನು ಆನ್ ಲೈನ್ ನಲ್ಲಿ ಸಲ್ಲಿಸುವ ಸೂಕ್ತ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ತಹಶೀಲ್ದಾರ ಗೌಸಿಯಬೇಗಂ ಹೇಳಿದರು.

ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗಾಗಿ ಸೂಕ್ತ ಕ್ರಮಕೈಗೊಳ್ಳಿ ಎಂದು ತಾಲ್ಲೂಕು ಪಂಚಾಯತಿ ಇ.ಒ ಪವನ್ ಕುಮಾರ್ ಸೂಚಿಸಿದರು.

ಕಂದಾಯ ಕೃಷಿ ಇಲಾಖೆಯ ಜಂಟಿಯಾಗಿ ಬೆಳೆ ಸಮೀಕ್ಷೆಯಲ್ಲಿ ಎರಡು ಎಕರೆ ನಿಂಬೆ ಬೆಳೆಯನ್ನು ಭತ್ತ ಎಂದು ಸಮೀಕ್ಷೆಯಲ್ಲಿ ನಮೂದಿಸಿದ್ದಾರೆ. ಸಮೀಕ್ಷೆ ಮಾಡಿದ ವರದಿಯು ಸಂಪೂರ್ಣವಾಗಿ ಮಾಡದೇ ಅಧಿಕಾರಿಗಳು ನಿರ್ಲಕ್ಷ ತೋರಿಸಿದ್ದಾರೆ, ಕೆಲ ರೈತರಿಗೆ ಬೆಳೆ ಪರಿಹಾರ ನೀಡಿದ್ದಾರೆ, ಇನ್ನೂ ಕೆಲ ರೈತರ ವರದಿ ನೀಡದೆ ನಷ್ಟ ಪರಿಹಾರ ಬಂದಿಲ್ಲ. ನಮ್ಮದೇ ಐದು ಎಕರೆ ದಾಳಿಂಬೆ ಬೆಳೆ ಅಕಾಲಿಕ ಮಳೆಗೆ ನಷ್ಟ ವಾಗಿದೆ, ಯಾವುದೇ ನಷ್ಟವಾಗಿಲ್ಲ ಎಂದು ಮಾಹಿತಿ ನೀಡಿರುವುದು ಎಷ್ಟು ಸರಿ?, ನಾನು ಎಸ್.ಟಿ. ವರ್ಗಕ್ಕೆ ಸೇರಿದ್ದು ಅನೇಕಬಾರಿ ಅರ್ಜಿ ಹಾಕಿದರು, ಇಲ್ಲಿಯವರೆಗೆ ತೋಟಗಾರಿಕೆ ಇಲಾಖೆಯಿಂದ ನನಗೆ ಯಾವುದೇ ಸೌಲಭ್ಯ ನೀಡಿಲ್ಲ ಎಂದು ನಾಮನಿರ್ದೇಶಕ ಮಣ್ಣೂರು ಸೂಗೂರು ಕರಿಯಪ್ಪ ಸಭೆಯಲ್ಲಿ ಆರೋಪಿಸಿದರು.

ತಾಲ್ಲೂಕಿನಲ್ಲಿ 8 ಜೋಳ ಖರೀದಿ ಕೇಂದ್ರ ಆರಂಭಿಸಲಾಗಿದೆ. ನಮ್ಮ ಬೇಡಿಕೆ 4 ಲಕ್ಷ ಇದೆ ಎಂದು ಆಹಾರ ಇಲಾಖೆಯ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು. ಜೋಳ ಖರೀದಿ ಕುರಿತು ಸಭೆಯಲ್ಲಿ ಹೆಚ್ಚ ಚರ್ಚಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.