ಪ್ರಜಾವಾಣಿ ವಾರ್ತೆ

ಕಂಪ್ಲಿ: ‘ಡಾ. ಅಂಬೇಡ್ಕರ್ ಅವರ ಸೈದ್ಧಾಂತಿಕ ಹೋರಾಟ ಮತ್ತು ವಿಚಾರಧಾರೆ ಸಮಾಜಕ್ಕೆ ದಾರಿದೀಪ’ ಎಂದು ಗಂಗಾವತಿಯ ಸಾಹಿತಿ ರಮೇಶ್ ಗಬ್ಬೂರು ತಿಳಿಸಿದರು.

ಇಲ್ಲಿಯ ಮುಸ್ಲಿಂ ಶಾದಿಮಹಲ್ನಲ್ಲಿ ರಾಜ್ಯ ಬೌದ್ಧ ಸಮಾಜ ಮತ್ತು ಅಂಬೇಡ್ಕರ್ ಅನುಯಾಯಿಗಳ ಬಳಗ ಭಾನುವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ ವಿಚಾರಧಾರೆಗಳು ಮತ್ತು ಸಮುದಾಯದ ಜವಾಬ್ದಾರಿ ಕುರಿತ ಚಿಂತನೆ ತರಬೇತಿ ಶಿಬಿರದಲ್ಲಿ ಮಾತನಾಡಿದರು.

‘ಎಲ್ಲರೂ ಒಪ್ಪುವಂಥ ಸಂವಿಧಾನ ರಚನೆ ಮಾಡಿದ್ದು, ಅದರ ತಳಹದಿಯಲ್ಲಿ ನಾವೆಲ್ಲರೂ ಸಾಮರಸ್ಯದಿಂದ ಜೀವನ ನಡೆಸಬೇಕು. ಇದು ಅವರಿಗೆ ನೀಡುವ ಬಹು ದೊಡ್ಡ ಗೌರವ’ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಬೌದ್ಧ ಸಮಾಜದ ತಾಲ್ಲೂಕು ಘಟಕದ ಗೌರವ ಅಧ್ಯಕ್ಷ ಚನ್ನಬಸಪ್ಪ ಮಾತನಾಡಿ, ‘ದೇಶದಲ್ಲಿರುವ ಪ್ರತಿಯೊಬ್ಬರಿಗೂ ಬದುಕುವ ಹಕ್ಕನ್ನು ಸಂವಿಧಾನದ ಮೂಲಕ ಅಂಬೇಡ್ಕರ್ ಕಲ್ಪಿಸಿದ್ದಾರೆ’ ಎಂದರು.

ಬೌದ್ಧ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಸುಗ್ಗೇನಹಳ್ಳಿ ರಮೇಶ್, ಪದಾಧಿಕಾರಿಗಳಾದ ಟಿ. ಶಿವಪ್ಪ, ಸುಧಾಕರ, ಎ. ಉಮೇಶ್, ಬಸವರಾಜ, ಪಿ.ಸಿ. ಅಂಜಿ, ಪಿ.ಸಿ. ಉಮೇಶ್, ಸಿ.ಕೆ. ಮಂಜುನಾಥ, ಪೂಜಾರಿ ತಿಮ್ಮಪ್ಪ, ಕೃಷ್ಣ, ಸಿದ್ಧಿ ಹರ್ಷ, ಪ್ರಮುಖರಾದ ಎಚ್.ಸಿ. ರಾಘವೇಂದ್ರ, ಏಸಯ್ಯ, ಹುಸೇನಪ್ಪ ಹಂಚಿನಾಳ, ಮೌಲಾಹುಸೇನ್, ವೀರೇಶಪ್ಪ, ದೊಡ್ಡಮನಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.