ಬಳ್ಳಾರಿ: ನಗರದಲ್ಲಿ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ನಗರದ ಬ್ರೂಸ್ಪೇಟೆ ಪೊಲೀಸ್ ಠಾಣೆಯಲ್ಲಿ ಒಟ್ಟು 6 ಪ್ರಕರಣಗಳು ದಾಖಲಾಗಿದ್ದರೂ, ಈವರೆಗೆ ಯಾರನ್ನೂ ಪೊಲೀಸರು ಬಂಧಿಸಿಲ್ಲ.

ಶಾಸಕ ನಾರಾ ಭರತ್ ರೆಡ್ಡಿ ಕಡೆಯವರು ನೀಡಿದ ದೂರು ಆಧರಿಸಿ ಮೂರು, ಬಿಜೆಪಿ ಕಡೆಯವರು ನೀಡಿದ ದೂರು ಆಧರಿಸಿ ಎರಡು ಮತ್ತು ಪೊಲೀಸರೇ ಸ್ವಯಂ ಪ್ರೇರಿತರಾಗಿ ಒಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗಲಭೆ ಸ್ಥಳದ ವಿಡಿಯೊಗಳನ್ನು ಪರಿಶೀಲಿಸಿ, ಅದರಲ್ಲಿ ಇರುವವರನ್ನು ಕರೆತಂದು ವಿಚಾರಣೆ ಮಾಡಲಾಗುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಕಡೆಯ 45 ಜನರನ್ನು ನಗರ ಡಿವೈಎಸ್ಪಿ ಚಂದ್ರಕಾಂತ ನಂದಾರೆಡ್ಡಿ, ಬ್ರೂಸ್ಪೇಟೆ ಠಾಣೆಯ ಇನ್ಸ್ಪೆಕ್ಟರ್ ಮಹಾಂತೇಶ ಪ್ರಶ್ನಿಸಿದ್ದಾರೆ. ಆದರೆ, ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

ಭರತ್ ರೆಡ್ಡಿ ಕಡೆಯ ಅಂಗರಕ್ಷಕನೊಬ್ಬನನ್ನು ಠಾಣೆಗೆ ಕರೆತರಲಾಗಿದೆ. ಕೆಲವರು ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ. ಆದರೆ, ಮಾಹಿತಿ ಖಚಿತವಾಗಿಲ್ಲ.

ಪಾದಯಾತ್ರೆ ಮಾಡುತ್ತೇವೆ: ಶ್ರೀರಾಮುಲು

ಬಳ್ಳಾರಿ: ‘ ಗುಂಡಿನ ದಾಳಿ ನಡೆಸಿ ವ್ಯಕ್ತಿ ಹತ್ಯೆ ಮಾಡಿದ ಅರೋಪಿಗಳನ್ನು ಬಂಧಿಸಬೇಕು. ಶಾಸಕ ಭರತ್ ರೆಡ್ಡಿ ಜತೆಗೆ ಕೈಜೋಡಿಸಿರುವ ಬಳ್ಳಾರಿ ನಗರ ಡಿವೈಎಸ್ಪಿ ಅವರನ್ನು ಅಮಾನತು ಮಾಡಬೇಕು’ ಎಂದು ಮಾಜಿ ಸಚಿವ ಶ್ರೀರಾಮುಲು ಇಲ್ಲಿ ಆಗ್ರಹಪಡಿಸಿದರು. ಅಲ್ಲದೆ ಎಸ್ಪಿ ಅವರ ಅಮಾನತು ಆದೇಶ ಹಿಂಪಡೆಯಬೇಕು. ಇಲ್ಲದಿದ್ದರೆ ಬಳ್ಳಾರಿಯಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸುತ್ತೇವೆ’ ಎಂದು ಹೇಳಿದರು. ‘ಜನಾರ್ದನ ರೆಡ್ಡಿ ಅವರಿಗೆ ಸೂಕ್ತ ಭದ್ರತೆ ನೀಡಬೇಕು. ಶಾಸಕ ಭರತ್ರೆಡ್ಡಿ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು’ ಎಂದು ಆಗ್ರಹಿಸಿದರು. ‘ಡಿವೈಎಸ್ಪಿ ಚಂದ್ರಕಾಂತ ನಂದಾರೆಡ್ಡಿ ತಮ್ಮ ಸಮಕ್ಷದಲ್ಲೇ ನನ್ನ ಮನೆ ಮೇಲೆ ಕಲ್ಲು ಬಾಟಲಿ ತೂರಾಟ ಮಾಡಿಸಿದರು. ಗುಂಡಿನ ದಾಳಿಗೆ ಕಾರಣರಾದರು. ಎಸ್ಪಿ ವೃತ್ತದಿಂದ ಶಾಸಕ ಭರತ್ ರೆಡ್ಡಿ ನಮ್ಮ ಮನೆಯತ್ತ ಬರುವಾಗಲೇ ಡಿವೈಎಸ್ಪಿ ಅವರಿಗೆ ರಕ್ಷಣೆ ಒದಗಿಸಿದ್ದರು’ ಎಂದು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.