ಹರಪನಹಳ್ಳಿ : ತಾಲ್ಲೂಕಿನ ಕಮ್ಮತ್ತಹಳ್ಳಿ ವಿರಕ್ತ ಮಠದ ವತಿಯಿಂದ ಲಿಂ. ಚನ್ನಬಸವ ಮಹಾ ಶಿವಯೋಗಿ ಅವರ 19 ನೇ ವರ್ಷದ ಸ್ಮರಣೋತ್ಸವ ಹಾಗೂ ಬಸವತತ್ವ ಸಮ್ಮೇಳನಕ್ಕೆ ಗುರುವಾರ ಚಾಲನೆ ದೊರೆಯಿತು.

ಚಾಲನೆ ನೀಡಿದ ಪಾಂಡೊಮಟ್ಟಿ ಗುರುಬಸವ ಸ್ವಾಮೀಜಿ ಮಾತನಾಡಿ, ಚನ್ನಬಸವ ಶಿವಯೋಗಿಗಳು ಆದರ್ಶ ವ್ಯಕ್ತಿತ್ವ ಹೊಂದಿದ್ದರು. ಅವರ ಸ್ಮರಣೆ ನೆಪದಲ್ಲಿ ಬಸವ ತತ್ವಗಳ ಪ್ರಚುರ ಪಡಿಸಲಾಗುತ್ತದೆ ಎಂದರು.

ಅಲಂಕೃತ ಎತ್ತಿನ ಬಂಡಿಯಲ್ಲಿ ಚನ್ನಬಸವ ಶಿವಯೋಗಿಗಳ ಭಾವಚಿತ್ರದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಿತು.

ಕಮ್ಮತ್ತಹಳ್ಳಿ ಬಸವ ಭಜನಾ ಸಂಘ, ನಂದಿಬೇವೂರು ನಂದಿ ಬಸವೇಶ್ವರ ಕಲಾ ತಂಡ, ವೀರಭದ್ರೇಶ್ವರ ಜನಪದ ಕಲಾ ತಂಡ, ನಾಯಕನಹಳ್ಳಿ ಹುಚ್ಚಪ್ಪ ಡೊಳ್ಳು ಕುಣಿತ ಕುಂಡ , ಹೊಸಪೇಟೆ ನಾಸಿಕ್ ಡೋಲು, ಸಮ್ಮಾಳ, ವಾದ್ಯಗಳೊಂದಿಗೆ, ಹೆಣ್ಣು ಮಕ್ಕಳು ಕಳಸ ಹಿಡಿದು, ಕುಂಭ ಹೊತ್ತು ಮಹಿಳೆಯರು ಮೆರವಣಿಗೆಯಲ್ಲಿ ಗಮನ ಸೆಳೆದರು.

ಪುಣಬಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಸಮ್ಮ ಕಲ್ಲಳ್ಳಿ ಹನುಮಂತಪ್ಪ ಧ್ವಜಾರೋಹಣ ನೆರವೇರಿಸಿದರು. ಗೌರಿ ಶಂಕರ ಸ್ವಾಮೀಜಿ, ರುದ್ರಮುನಿ ಸ್ವಾಮೀಜಿ, ಜಯಬಸವಾನಂದ ಸ್ವಾಮೀಜಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.