ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಡೂರು: ಸಾಂಬಾರು ಪಾತ್ರೆಗೆ ಬಿದ್ದು ಮಗು ಸಾವು

Published 7 ಮಾರ್ಚ್ 2024, 15:46 IST
Last Updated 7 ಮಾರ್ಚ್ 2024, 15:46 IST
ಅಕ್ಷರ ಗಾತ್ರ

ಸಂಡೂರು (ಬಳ್ಳಾರಿ): ತಾಲ್ಲೂಕಿನ‌ ಚೋರನೂರು ಹೋಬಳಿಯ ಎಚ್.ಕೆ ಹಳ್ಳಿ ಗ್ರಾಮದಲ್ಲಿ ಮಂಜುನಾಥ ಮತ್ತು ಹುಲಿಗೆಮ್ಮ ದಂಪತಿಯ ಪುತ್ರ ಸಮರ್ಥ (2) ಸಾಂಬಾರ್ ಪಾತ್ರೆಯಲ್ಲಿ ಬಿದ್ದು ಮೃತಪಟ್ಟಿದೆ.

‘ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಾಂಬಾರು ಸಿದ್ಧಪಡಿಸಲಾಗಿತ್ತು. ಪಾತ್ರೆಯ ಪಕ್ಕದಲ್ಲೇ ಇಟ್ಟಿದ್ದ ಹಪ್ಪಳ ತೆಗೆದುಕೊಳ್ಳಲು ಬಂದ ಮಗು ಸಾಂಬಾರು ಪಾತ್ರೆಗೆ ಬಿದ್ದಿದೆ. ಗಾಯಗೊಂಡಿದ್ದ ಮಗುವನ್ನು ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಲಿಲ್ಲ. ಪೋಷಕರ ಕೋರಿಕೆ ಮೇರೆಗೆ ಪ್ರಕರಣ ದಾಖಲಿಸಿಕೊಂಡಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT