ನಾಗಮೋಹನ್ ದಾಸ್ ವರದಿಯಲ್ಲಿ ಸೂಕ್ಷ್ಮಾತಿ ಸೂಕ್ಷ್ಮ ಜಾತಿಗಳಿಗೆ ಶೇ 1ರ ಮೀಸಲಾತಿ ನೀಡಲಾಗಿತ್ತು. ಆದರೆ ಈಗ ಮೇಲ್ವರ್ಗದ ಸಮುದಾಯಗಳೊಂದಿಗೆ ಸೇರಿಸಲಾಗಿದೆ. ಈಗ ಶೇ 10ರ ಮಿಸಲಾತಿ ಕೊಟ್ಟರೂ ಸಮುದಾಯಕ್ಕೆ ನ್ಯಾಯ ಸಿಗುವುದಿಲ್ಲ. ಯಾವುದೇ ಕಾರಣಕ್ಕೂ ನಾವು ಅವರೊಂದಿಗೆ ನಾವು ಸೇರುವುದಿಲ್ಲ. ಮೀಸಲಾತಿ ಕೊಡದಿದ್ದರೂ ಚಿಂತೆ ಇಲ್ಲ. ಭಿಕ್ಷೆ ಬೇಡಿ ಬದುಕುತ್ತೇವೆಯೇ ಹೊರತು ಇಂಥ ಅನ್ಯಾಯ ಸಹಿಸುವುದಿಲ್ಲ. ಸರ್ಕಾರ ಹೀಗೆ ಮಾಡುವ ಬದಲು ವಿಷ ಕೊಡಬಹುದಿತ್ತು ಎಂದು ರಾಜ್ಯ ಎಸ್‌ಸಿಎಸ್‌ಟಿ ಅಲೆಮಾರಿ ಬುಡಕಟ್ಟು ಮಹಾಸಭಾದ ಬಳ್ಳಾರಿ ಜಿಲ್ಲಾ ಅಧ್ಯಕ್ಷ ಶಿವಕುಮಾರ್ ಹೇಳಿದ್ದಾರೆ.