ಹೂವಿನಹಡಗಲಿ: ಕಬ್ಬು ಪೂರೈಕೆಯ ಬಾಕಿ ಹಣ ಪಾವತಿಗೆ ಆಗ್ರಹಿಸಿ ಬೀರಬ್ಬಿಯ ಮೈಲಾರ ಶುಗರ್ಸ್ ಎದುರು ರೈತರು ಬುಧವಾರ ಪ್ರತಿಭಟನೆ ನಡೆಸಿದರು.

ಕಾರ್ಖಾನೆಗೆ ಕಬ್ಬು ನೀಡಿ 15 ದಿನದೊಳಗೆ ಹಣ ಪಾವತಿಸುವುದಾಗಿ ಹೇಳಿದ್ದ ಅಧಿಕಾರಿಗಳು ಇದೀಗ ಮೂರು ತಿಂಗಳಾದರೂ ಹಣ ನೀಡದೇ ಸತಾಯಿಸುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಕಬ್ಬು ಬೆಳೆಗಾರ ಕೊಡಬಾಳ ಹನುಮಂತಪ್ಪ ಮಾತನಾಡಿ, ಕಬ್ಬು ಬೆಳೆಯಲು ಲಕ್ಷಾಂತರ ಹಣ ಖರ್ಚು ಮಾಡಿದ್ದೇವೆ. ಸಾಲದ ಬಡ್ಡಿ ಬೆಳೆಯುತ್ತಿದೆ. ಕಾರ್ಖಾನೆಗೆ ಕಬ್ಬು ನೀಡಿ ಮೂರು ತಿಂಗಳಾದರು ಹಣ ನೀಡುತ್ತಿಲ್ಲ. ಕೃಷಿ ಚಟುವಟಿಕೆಗೂ ಹಣವಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದೇವೆ. ತಕ್ಷಣ ಎಲ್ಲ ರೈತರಿಗೆ ಕಬ್ಬಿನ ಬಾಕಿ ಹಣ ನೀಡಬೇಕು ಎಂದು ಆಗ್ರಹಿಸಿದರು.

ರೈತರಾದ ಹಾವಸಿ ನಾಗಪ್ಪ, ಕೋಡಬಾಳ ಬಸಜ್ಜ, ಗಡ್ಡಿಗೌಡ್ರ ಸಿದ್ದಪ್ಪ, ವಿಜಯಕುಮಾರ್, ಸಂಗಜ್ಜ, ವೀರಣ್ಣ, ನಿಂಗಪ್ಪ, ಹೊನ್ನಪ್ಪ, ಪರಮೇಶಪ್ಪ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.