ಹೊಸಪೇಟೆ: ಮಾಜಿ ದೇವದಾಸಿಯರು ಹಾಗೂ ಅವರ ಕುಟುಂಬದವರ ಸರ್ವೇ ನಡೆಸಿ, ಅವರಿಗೆ ಪುನರ್ವಸತಿ ಕಲ್ಪಿಸುವಂತೆ ಆಗ್ರಹಿಸಿ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದವರು ಬುಧವಾರ ಸತತ ಮೂರನೇ ದಿನ ಇಲ್ಲಿನ ತಾಲ್ಲೂಕು ಕಚೇರಿ ಎದುರು ಧರಣಿ ನಡೆಸಿದರು.

ತಾಲ್ಲೂಕಿನ ನರಸಾಪುರ, ಬಸವನದುರ್ಗ, ನಾಗೇನಹಳ್ಳಿ, ಹೊಸಮಲಪನಗುಡಿ, ಕಡ್ಡಿರಾಂಪುರ, ವೆಂಕಟಾಪುರ, ಬುಕ್ಕಸಾಗರ, ಕಮಲಾಪುರ, ರಾಮಸಾಗರ, 10–ಮುದ್ಲಾಪುರ, ಕಂಪ್ಲಿ, ಬೆಳಗೋಡ್‌ಹಾಳ್, ಡಣಾಪುರ, ಇಟಗಿ, ಚಿಕ್ಕಜಾಯಿಗನೂರು, ಜೌಕು, ಹಂಪಾದೇವನಹಳ್ಳಿ, ಹೊನ್ನಳ್ಳಿ, ಮಾವಿನಹಳ್ಳಿ, ಮೆಟ್ರಿ, ದೇವಲಾಪುರ, ಉಪ್ಪಾರಹಳ್ಳಿ, ನಲ್ಲಾಪುರ ಹಾಗೂ ಚಿನ್ನಾಪುರದವರು ಮೂರನೇ ದಿನದ ಧರಣಿಯಲ್ಲಿ ಪಾಲ್ಗೊಂಡಿದ್ದರು.

ಎಲ್ಲ ಮಾಜಿ ದೇವದಾಸಿಯರಿಗೆ ನಿವೇಶನ ಕೊಟ್ಟು ಮನೆ ನಿರ್ಮಿಸಿಕೊಡಬೇಕು. ಐದು ಎಕರೆ ಜಮೀನು ಕೊಡಬೇಕು. ಪಿಂಚಣಿ ಹೆಚ್ಚಿಸಬೇಕು. ಯುವಕರಿಗೆ ನಿರುದ್ಯೋಗ ಭತ್ಯೆ ನೀಡಬೇಕು. ಗಣತಿಯಲ್ಲಿ ಬಿಟ್ಟು ಹೋದ ದೇವದಾಸಿಯರ ಹೆಸರು ಮರು ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿದರು.

ಸಂಘದ ಜಿಲ್ಲಾ ಅಧ್ಯಕ್ಷೆ ಕೆ. ನಾಗರತ್ನಮ್ಮ, ತಾಲ್ಲೂಕು ಅಧ್ಯಕ್ಷ ಕೆ. ಹಂಪಮ್ಮ, ಕಾರ್ಯದರ್ಶಿ ಎಸ್. ಯಲ್ಲಮ್ಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.