ತೆಕ್ಕಲಕೋಟೆ: ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಅಂಗವಿಕಲರ ಉಚಿತ ತಪಾಸಣಾ ಶಿಬಿರವು ಮೊದಲ ಮಹಡಿಯ ಸಭಾಂಗಣದಲ್ಲಿ ಆಯೋಜಿಸಿದ್ದು, ಮಹಡಿಯ ಮೆಟ್ಟಿಲು ಹತ್ತಲು ಅಂಗವಿಕಲರು ಹರಸಾಹಸಪಟ್ಟರು.

ತಪಾಸಣಾ ಶಿಬಿರಕ್ಕೆ 200ಕ್ಕೂ ಹೆಚ್ಚು ಅಂಗವಿಕಲರು ಬಂದಿದ್ದರಿಂದ ಕಾರ್ಯಕ್ರಮವು ಗೊಂದಲದ ಗೂಡಾಯಿತು. ಮಹಡಿ ಹತ್ತಲು ಆಗದ ವೃದ್ಧರು ತಾಸುಗಟ್ಟಲೆ ಪಂಚಾಯಿತಿ ಆವರಣದಲ್ಲಿ ಕಾಯುವಂತಾಯಿತು.

ಕಾರ್ಯಕ್ರಮದ ಅವ್ಯವಸ್ಥೆ ಕುರಿತು ಹುಸೇನ್ ಸಾಬ್, ನರಸಿಂಹಮೂರ್ತಿ, ಪರಶುರಾಮ, ಭರಮಪ್ಪ, ಮಡಿವಾಳ ವೆಂಕೋಬ ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಸ್. ಆನಂದ, ಸರ್ಕಾರದ ಸವಲತ್ತುಗಳನ್ನು ಅಧಿಕಾರಿಗಳು ಪ್ರಾಮಾಣಿಕವಾಗಿ ಅಂಗವಿಕಲರಿಗೆ ನೀಡುವುದು ಪುಣ್ಯದ ಕೆಲಸ ಎಂದರು.

ಈ ಸಂದರ್ಭದಲ್ಲಿ 158 ಜನ ಅಂಗವಿಕಲರ ತಪಾಸಣೆ ನಡೆಸಲಾಯಿತು. ಇವರಲ್ಲಿ 37 ಜನರನ್ನು ಸಾಧನ ಸಲಕರಣೆಗಳಿಗೆ, ಶ್ರವಣ ಸಾಧನಗಳಿಗೆ 14, ಉಚಿತ ಗಾಲಿಕುರ್ಚಿಗೆ 5 ಜನ ಸೇರಿದಂತೆ ಅಂಗವಿಕಲತೆಯ ಆಧಾರದಲ್ಲಿ105 ಜನರಿಗೆ ವಿವಿಧ ಸೌಲಭ್ಯಗಳನ್ನು ನೀಡಲು ಗುರುತಿಸಲಾಯಿತು.

ಬಳ್ಳಾರಿ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ, ವಿಶ್ವ ಭಾರತ ಕಲಾನಿಕೇತನ ಮತ್ತು ಶಿಕ್ಷಣ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ನೋಡಲ್ ಅಧಿಕಾರಿ ನಾಗೇಂದ್ರಪ್ಪ ವಿ, ಚಲನವಲನ ತಜ್ಞ ನಾರಾಯಣ ನಾಯಕ್, ಮನೋರೋಗ ತಜ್ಞೆ ಡಾ. ಆಶಾ ನವೀನ್, ಫಿಸಿಯೋ ದೇವರಾಜ, ಲೆಕ್ಕ ಸಹಾಯಕಿ ನೀಲಮ್ಮ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.