ಹಾಲು ಉತ್ಪಾದಕರ ಒಕ್ಕೂಟದ ಈ ಚುನಾವಣೆಯಲ್ಲಿಯೂ ಹಣ ಜಾತಿಯ ಮೇಲಾಟವೇ ನಡೆಯುತ್ತಿದೆ. ತಂಡವೊಂದು ಒಂದು ಮತಕ್ಕೆ ₹1 ಲಕ್ಷದ ವರೆಗೆ ಆಮಿಷವೊಡ್ಡುತ್ತಿದೆ. ಅದರ ಎದುರಾಳಿ ತಂಡ ₹50 ಸಾವಿರದ ವರೆಗೆ ಕೊಡುತ್ತಿದೆ. ಜತೆಗೆ ಜಾತಿಯ ಕಾರ್ಡ್ ಅನ್ನು ಮುನ್ನೆಲೆಗೆ ತಂದಿವೆ. ವಿಜಯನಗರ ಜಿಲ್ಲೆಯಲ್ಲಿ ಇರುವ ಒಟ್ಟು ಮತಗಳಲ್ಲಿ 150ಕ್ಕೂ ಅಧಿಕ ಮತಗಳು ಒಂದೇ ಸಮುದಾಯಕ್ಕೆ ಸೇರಿದವಾಗಿವೆ ಎನ್ನಲಾಗಿದೆ. ಇದು ಕೆಲವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ‘ಪ್ರಬಲ’ ಅಭ್ಯರ್ಥಿಗಳಿಗೆ ಸಂಕಟ ಎದುರಾಗಿದೆ.