ಸಂಡೂರು: ಕಾರ್ಮಿಕರ ಕಾನೂನುಗಳಲ್ಲಿ ಮಾಲೀಕರ ಪರವಾದ ತಿದ್ದುಪಡಿಗಳನ್ನು ವಿರೋಧಿಸುವುದು, ಸಂಘದ ಹಕ್ಕು, ಮುಷ್ಕರದ ಹಕ್ಕನ್ನು ಕಸಿಯುವ ಕಾರ್ಮಿಕ ಸಂಹಿತೆಗಳ ನಿಷೇಧಿಸುವಂತೆ ಒತ್ತಾಯಿಸಿ ಸಿಐಟಿಯು, ಅಂಗನವಾಡಿ ನೌಕರರ ಸಂಘದ ಮುಖಂಡರು ಬುಧವಾರ ಸಹಿ ಸಂಗ್ರಹ ಚಳುವಳಿಯ ಮನವಿಯನ್ನು ಸಂಡೂರಿನ ಕಾರ್ಮಿಕ ಇಲಾಖೆಯ ಅಧಿಕಾರಿ ಪರಶುರಾಮ ಅವರ ಮೂಲಕ ರಾಜ್ಯದ ಮುಖ್ಯಮಂತ್ರಿಯವರಿಗೆ ಮನವಿ ಪತ್ರ ರವಾನಿಸಿದರು.

ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಜೆ.ಎಂ.ಚೆನ್ನಬಸಯ್ಯ ಸ್ವಾಮಿ ಮಾತನಾಡಿ, ‘ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿ ಮಾಡಬೇಕು. ಮಹಿಳೆಯರಿಗೆ ರಾತ್ರಿ ಪಾಳೆಯ. ಅಪಾಯದ ಕೆಲಸ ನೀಡಬಾರದು. 1948ರ ಕರ್ನಾಟಕ ಕಾರ್ಖಾನೆಗಳ ಕಾಯ್ದೆಯನ್ನು ಸಮರ್ಪಕವಾಗಿ ಜಾರಿ ಮಾಡಬೇಕು. ದಿನಕ್ಕೆ ಎಂಟು ಗಂಟೆಯ ಕೆಲಸ ನೀಡಬೇಕು’ ಎಂದು ಒತ್ತಾಯಿಸಿದರು.

ಕೇಂದ್ರದ ಬಿಜೆಪಿ ಸರ್ಕಾರವು ಶ್ರೀಮಂತರಿಗೆ, ಕಾರ್ಪೋರೇಟ್ ಕಂಪನಿಗಳ ತೆರಿಗೆ ವಿನಾಯಿತಿ ನೀಡುತ್ತದೆ. ಇದಲ್ಲದೇ, ಸಾಲ ಮನ್ನಾ ಕೂಡ ಮಾಡಿದೆ. ಇದು ಸರಿಯಲ್ಲ. ದೇಶ ಕಟ್ಟುವ, ದುಡಿಯುವ ಬಡ ಜನರಿಗೆ ಸರ್ಕಾರವು ಮೂಲ ಸೌಲಭ್ಯಗಳನ್ನು ಕಲ್ಪಿಸಲು ಮೊದಲು ಆದ್ಯತೆ ನೀಡಬೇಕು’ ಎಂದು ಒತ್ತಾಯಿಸಿದರು.

ಸಂಡೂರು ತಾಲ್ಲೂಕಿನ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಸ್.ಖಾಜಾಬನ್ನಿ, ಕಾರ್ಯದರ್ಶಿ ರೇಖಾ, ಖಜಾಂಜಿ ವಿ.ನಾಗರತ್ನ, ಮುಖಂಡರಾದ ಮಲ್ಲಿಕಾರ್ಜುನ, ಕೃಷ್ಣವೇಣಿ, ಚಂದ್ರ, ನೇತ್ರ, ಚೆನ್ನಮ್ಮ, ಮುದ್ದಮ್ಮ, ರೇಣುಕಾ, ದೊಡ್ಡಮ್ಮ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.