ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿಪಾಲಾದ ಎಂಜಿನಿಯರಿಂಗ್ ಪದವೀಧರರು: ಬಿ. ನಿರಂಜನ್ ವಿಷಾದ

ವೀರಶೈವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
Last Updated 26 ಆಗಸ್ಟ್ 2018, 13:50 IST
ಅಕ್ಷರ ಗಾತ್ರ

ಬಳ್ಳಾರಿ: ‘ದೇಶದಲ್ಲಿ ಲಕ್ಷಾಂತರ ಎಂಜಿನಿಯರಿಂಗ್‌ ಪದವೀಧರರು ಉದ್ಯೋಗವಿಲ್ಲದೆ ಅತಂತ್ರರಾಗಿದ್ದಾರೆ. ಹೀಗಾಗಿ ವೀರಶೈವ ವಿದ್ಯಾರ್ಥಿಗಳು ಐಎಎಸ್‌, ಸಿ.ಎ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಗಮನ ಹರಿಸಿ ಉನ್ನತ ಹುದ್ದೆಗಳಿಗೆ ಪ್ರಯತ್ನಿಸಬೇಕು’ ಎಂದು ರಾಜ್ಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ನಿರಂಜನ್ ಕರೆ ನೀಡಿದರು.

ಸಂಘದ ಜಿಲ್ಲಾ ಘಟಕವು ನಗರದ ಅಲ್ಲೀಪುರದ ಮಹಾದೇವತಾತ ಮಠದ ಶಾಲೆ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ವೀರಶೈವ ವಿದ್ಯಾರ್ಥಿಗಳ 13ನೇ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸಮುದಾಯದವರು ಎಂಜಿನಿಯರಿಂಗ್ ಕ್ಷೇತ್ರದತ್ತ ಹೋಗದೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಿದರೆ ಸಂಘ ನೆರವು ನೀಡುತ್ತದೆ’ ಎಂದರು.

‘ಡಿ ದರ್ಜೆ ನೌಕರರಿಗಿಂತಲೂ ಕಡಿಮೆ ಸಂಬಳಕ್ಕೆ ಕೆಲಸ ಮಾಡಬೇಕಾದ ಅನಿವಾರ್ಯತೆ ಎಂಜಿನಿಯರುಗಳ ಮುಂದಿದೆ. ರಾತ್ರಿ ಕಾವಲುಗಾರ ಹುದ್ದೆಗೆ ಎಂ.ಟೆಕ್‌ ಪದವೀಧರರು ಅರ್ಜಿ ಸಲ್ಲಿಸಿದ ನಿದರ್ಶನವೂ ಇದೆ’ ಎಂದರು.

ವಿದ್ಯಾರ್ಥಿಗಳು ತಮ್ಮ ಆಸ್ತಕಿದಾಯಕ ಕ್ಷೇತ್ರಗಳಲ್ಲಿ ಮುಂದುವರೆದು ಸಾಧನೆ ಮಾಡಬೇಕು. ಪೋಷಕರು ಮಕ್ಕಳ ಮೇಲೆ ಒತ್ತಡ ಹೇರಬಾರದು’ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಜಿ.ಸೋಮಶೇಖರ ರೆಡ್ಡಿ, ‘ಮಕ್ಕಳು ಮತ್ತು ಯವಜನರು ಸಾಧನೆಯ ಹಾದಿಯತ್ತ ನಡೆಯಲು ಪ್ರತಿಭಾ ಪುರಸ್ಕಾರ ಅತ್ಯಗತ್ಯ’ ಎಂದರು.

ನಕಲಿ ಸ್ವಾಮೀಜಿ: ಎಮ್ಮಿಗನೂರಿನ ವಾಮದೇವ ಶಿವಾಚಾರ್ಯ ಸ್ವಾಮೀಜಿ, ‘ಕಾಫಿ ಪುಡಿಯಲ್ಲಿ ಕಲಬೆರಕೆ ಇರುವಂತೆ ಕಾವಿಧಾರಿಗಳಲ್ಲೂ ನಕಲಿ ಸ್ವಾಮೀಜಿಗಳು ಹೆಚ್ಚಾಗಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಸಮುದಾಯದ 276 ವಿದ್ಯಾರ್ಥಿಗಳನ್ನು ಗಣ್ಯರು ಪುರಸ್ಕರಿಸಿದರು.

ಕಮ್ಮರಚೇಡು ಮಠದ ಕಲ್ಯಾಣ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ್ ಗಾಣಿಗೇರ, ಪ್ರಮುಖರಾದ ಆರ್.ಎಚ್.ಎಂ.ಚನ್ನಬಸವಸ್ವಾಮಿ, ಎನ್.ಚಂದ್ರಶೇಖರ್, ಮಠದ ಅಧ್ಯಕ್ಷ ಎಸ್.ಚನ್ನನಗೌಡ, ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಉಡೇದ ಬಸವರಾಜ, ಪಾಲಿಕೆ ಸದಸ್ಯರಾದ ಮಲ್ಲನಗೌಡ, ಶ್ರೀನಿವಾಸ್ ಮೋತ್ಕರ್, ಗಣಿ ಉದ್ಯಮಿ ಕೆ.ಎಂ.ವಿಶ್ವನಾಥ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT