ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಗರಿಬೊಮ್ಮನಹಳ್ಳಿ: ಗರಿಗೆದರಿದ ಕೃಷಿ ಚಟುವಟಿಕೆ

ಹಗರಿಬೊಮ್ಮನಹಳ್ಳಿ: ವಾಡಿಕೆಗಿಂತಲೂ ಹೆಚ್ಚಿನ ಮಳೆ
Published 6 ಜೂನ್ 2024, 4:52 IST
Last Updated 6 ಜೂನ್ 2024, 4:52 IST
ಅಕ್ಷರ ಗಾತ್ರ

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನಲ್ಲಿ ಸತತ ಬರಗಾಲದಿಂದ ಕಂಗೆಟ್ಟಿದ್ದ ರೈತರ ಮೊಗದಲ್ಲಿ ಸಂತಸ ಮನೆ ಮಾಡಿದೆ. ಈ ಬಾರಿ ಉತ್ತಮ ಮಳೆ ಆಗುತ್ತಿರುವುದರಿಂದ ಮುಂಗಾರು ಹಂಗಾಮಿನ ಕುರಿತಂತೆ ರೈತರು ಭಾರಿ ನಿರೀಕ್ಷೆ ಹೊಂದಿದ್ದಾರೆ. ಇದಕ್ಕೆ ಕಾರಣ ವಾಡಿಕೆ ಮಳೆ 7.82ಸೆಂ.ಮೀ ಗಿಂತಲೂ ಶೇಕಡ 73ರಷ್ಟು (13.49 ಸೆಂ.ಮೀ) ಮಳೆಯಾಗಿದೆ.

ಮುಂಗಾರು ಪೂರ್ವ ಉತ್ತಮ ಮಳೆ ಸುರಿದಿರುವುದಿಂದ ಭೂಮಿಯನ್ನು ಮೋದಲೇ ಹದ ಮಾಡಿಕೊಂಡು ಬಿತ್ತನೆಗೆ ಸಜ್ಜಾಗಿದ್ದರು. ತಾಲ್ಲೂಕಿನ ಎಲ್ಲೆಡೆ ನಿಗದಿತ ಅವಧಿಯಲ್ಲಿ ಜೋಳ ಬಿತ್ತನೆಯಲ್ಲಿ ತೊಡಗಿಕೊಂಡಿದ್ದಾರೆ.

ತಾಲ್ಲೂಕಿನಲ್ಲಿ ಈ ಬಾರಿ 43,831 ಹೆಕ್ಟೇರ್ ಬಿತ್ತನೆ ಗುರಿ ಇದೆ, 15ಸಾವಿರ ಹೆಕ್ಟೇರ್ ನೀರಾವರಿ ಪ್ರದೇಶವಿದೆ. ಈಗಾಗಲೇ ಮಳೆಯಾಶ್ರಿತ 3500 ಹೆಕ್ಟೇರ್ ಬಿತ್ತನೆಯಾಗಿದೆ.

ತಾಲ್ಲೂಕಿನ ಮೂರು ರೈತ ಸಂಪರ್ಕ ಕೇಂದ್ರಗಳಲ್ಲಿ ಅಗತ್ಯ ಬಿತ್ತನೆ ಬೀಜಲಭ್ಯವಿದೆ. ರೈತರಿಗೆ ಅನುಕೂಲವಾಗುವಂತೆ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಹಾಗೂ ಮೋರಿಗೇರಿಯಲ್ಲಿ ಹೆಚ್ಚುವರಿ ಬೀಜ ವಿತರಣೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಮೆಕ್ಕೇಜೋಳ 575ಕ್ವಿಂಟಲ್, ರಾಗಿ 15.8 ಕ್ವಿಂಟಲ್, ತೊಗರಿ 35.8ಕ್ವಿಂಟಲ್, ಜೋಳ 11.5ಕ್ವಿಂಟಲ್, ಸೂರ್ಯಕಾಂತಿ 16.2 ಕ್ವಿಂಟಲ್, ನವಣೆ 20 ಕ್ವಿಂಟಲ್ ದಾಸ್ತಾನು ಮಾಡಲಾಗಿದೆ. ರೈತರ ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಬೀಜಗಳನನ್ನು ಪೂರೈಸಲು ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಹೇಳುತ್ತಾರೆ. ಮುಂಗಾರು ಮಳೆ ಪೂರ್ವ ಮತ್ತು ಆರಂಭ ಉತ್ತಮವಾಗಿರುವುದಕ್ಕೆ ರೈತರಲ್ಲಿ ಉತ್ತಮ ಫಸಲಿನ ನಿರೀಕ್ಷೆಯೂ ದುಪ್ಪಟ್ಟಾಗಿದೆ.

ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಕೆಚ್ಚಿನಬಂಡಿ ಗ್ರಾಮದಲ್ಲಿ ರೈತರು ಜೋಳ ಬಿತ್ತನೆಯಲ್ಲಿ ನಿರತರಾಗಿರುವುದು
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಕೆಚ್ಚಿನಬಂಡಿ ಗ್ರಾಮದಲ್ಲಿ ರೈತರು ಜೋಳ ಬಿತ್ತನೆಯಲ್ಲಿ ನಿರತರಾಗಿರುವುದು

ಈ ಬಾರಿ ಜಮೀನು ಹದಗೊಳಿಸಿಕೊಂಡು ರೋಹಿಣಿ ಮಳೆ ಬೀಳುವ ಸಮಯದಲ್ಲಿಯೇ ಮೂರೂವರೆ ಎಕರೆಯಲ್ಲಿ ಜೋಳ ಬಿತ್ತನೆ ಮಾಡಲಾಗಿದೆ. ಉತ್ತಮ ಇಳುವರಿ ನಿರೀಕ್ಷೆ ಇದೆ.

-ದಾದಮಮ್ಮನ ಮಂಜುನಾಥ ರೈತ.

ಕೆಲವು ಅಂಗಡಿಗಳಲ್ಲಿ ಕಳಪೆ ಗುಣಮಟ್ಟದ ಬಿತ್ತನೆ ಬೀಜ ಮಾರಾಟ ಮಾಡಲಾಗುತ್ತಿದೆ. ಕೃಷಿ ಇಲಾಖೆಯ ಅಧಿಕಾರಿಗಳು ತಪಾಸಣೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು.

- ಪೂಜಾರ ಸಿದ್ದಪ್ಪ ಚಿಮ್ಮನಹಳ್ಳಿ.

ಬೇಡಿಕೆಗೆ ಅನುಗುಣವಾಗಿ ರಸಗೊಬ್ಬರ ಬಿತ್ತನೆ ಬೀಜಗಳ ಸಂಗ್ರಹವಿದೆ. ಅಧಿಕೃತ ಮಾರಾಟ ಮಳಿಗೆಗಳಲ್ಲಿ ಬಿತ್ತನೆ ಬೀಜ ರಸಗೊಬ್ಬರ ಖರೀದಿಸಬೇಕು. ಹೆಚ್ಚಿನ ದರ ನಿಗದಿ ಪಡಿಸಿದರೆ ಕ್ರಮ ಜರುಗಿಸಲಾಗುವುದು.

- ಎಚ್.ಸುನೀಲ್‍ಕುಮಾರ್ ನಾಯ್ಕ ಸಹಾಯಕ ಕೃಷಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT