ಹರಪನಹಳ್ಳಿ: ಹರಪನಹಳ್ಳಿ ತಾಲ್ಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಮಂಡಳಿಯ 14 ನಿರ್ದೇಶಕ ಸ್ಥಾನಗಳ ಆಯ್ಕೆಗೆ ಭಾನುವಾರ ಮತದಾನ ಪ್ರಕ್ರಿಯೆ ಶಾಂತಿಯುತ ಮುಕ್ತಾಯಗೊಂಡಿತು.

ನಗರದ ಹಿರೆಕೆರೆ ವೃತ್ತದಲ್ಲಿರುವ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ 5 ಮತಪೆಟ್ಟಿಗೆ ಇರಿಸಲಾಗಿತ್ತು. ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಹಾಗೂ ಪತಿ ಎಚ್.ಎಂ.ಮಲ್ಲಿಕಾರ್ಜುನ ಅವರು ತಮ್ಮ ಅಭಿಮಾನಿಗಳೊಂದಿಗೆ ಬಂದು ಮತ ಚಲಾಯಿಸಿದರು.

ಎ ತರಗತಿಯ 8 ಸ್ಥಾನಗಳಿಗೆ 13 ಜನ ಸ್ಪರ್ಧಿಸಿದ್ದರು. ಒಟ್ಟು 27 ಮತದಾರರ ಪೈಕಿ 26 ಸದಸ್ಯರು ಮತ ಚಲಾಯಿಸಿದ್ದು, ಒಬ್ಬರು ಗೈರಾಗಿದ್ದಾರೆ.

ಬಿ ತರಗತಿಯ 6 ಸ್ಥಾನಗಳಿಗೆ 13 ಜನ ಸ್ಪರ್ಧಿಸಿದ್ದರು. ಈ ವಿಭಾಗದಲ್ಲಿ ನಾಲ್ಕು ಮತಪೆಟ್ಟಿಗೆ ಪ್ರತ್ಯೇಕವಾಗಿ ಇರಿಸಿದ್ದರು.

ಮತದಾನಕ್ಕೆ ಮೊದಲ ಪಟ್ಟಿಯಲ್ಲಿ ಅರ್ಹತೆ ಪಡೆದಿದ್ದ 725 ಮತದಾರರ ಪೈಕಿ 700 ಸದಸ್ಯರು ಮತ ಚಲಾಯಿಸಿದ್ದಾರೆ. ಹೈಕೋರ್ಟ್ ಮೊರೆ ಹೋಗಿ ಮತದಾನಕ್ಕೆ ಅರ್ಹತೆ ಪಡೆದಿದ್ದ 260 ಜನ ಮತದಾರರಲ್ಲಿ 176 ಮಂದಿ ಮತಚಲಾಯಿಸಿದ್ದು, ಉಳಿದ 84 ಜನ ಮತದಾನದಿಂದ ದೂರ ಉಳಿದಿದ್ದಾರೆ. ಬಿ ತರಗತಿಯಲ್ಲಿ ಶೇ 88.93 ರಷ್ಟು ಮತದಾನವಾಗಿದೆ.

ಚುನಾವಣೆ ಅಧಿಕಾರಿಯಾಗಿ ಜಿ.ಎಸ್.ಸುರೇಂದ್ರ ಕಾರ್ಯ ನಿರ್ವಹಿಸಿದರು. ಮುಂಜಾಗ್ರತವಾಗಿ ಪೊಲೀಸ್ ಬಂದೊಬಸ್ತ್ ಒದಗಿಸಲಾಗಿತ್ತು. ಪ್ರಭಾರ ಕಾರ್ಯದರ್ಶಿ ತಿರುಪತಿ ಇದ್ದರು.

ಎರಡು ಗುಂಪಿನ ಅಭ್ಯರ್ಥಿಗಳು ಮತಕೇಂದ್ರದ ಮುಂದೆ ನಿಂತು ಮತದಾರರನ್ನು ಸೆಳೆಯುವ ಕಸರತ್ತು ನಡೆಸಿದ್ದರು.ಸಂಜೆ ಮತ ಎಣಿಕೆ ಪ್ರಕ್ರಿಯೆ ಆರಂಭಿಸಿದ್ದು, ನ್ಯಾಯಾಲಯದಿಂದ ಮದ್ಯಂತರ ತಡೆ ಆದೇಶ ಇರುವ ಕಾರಣ ಫಲಿತಾಂಶ ಘೋಷಿಸುವುದಿಲ್ಲ ಎಂದು ಚುನಾವಣೆ ಅಧಿಕಾರಿ ಜಿ.ಎಸ್.ಸುರೇಂದ್ರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.