ಹೂವಿನಹಡಗಲಿ: ‘ಪೋಷಕರು ಮಕ್ಕಳ ಕೈಗೆ ಮೊಬೈಲ್ ಫೋನ್ ಕೊಡುವುದರ ಬದಲು ಪುಸ್ತಕ ನೀಡಿ, ಓದುವ ಹವ್ಯಾಸ ಬೆಳೆಸಬೇಕು’ ಎಂದು ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕಿ ಬಿ.ಎಂ. ಶ್ವೇತಾ ಹೇಳಿದರು.

ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ ಶಾಖಾ ಗ್ರಂಥಾಲಯ, ಬೀಚಿ ಗ್ರಂಥಾಲಯ ಬೆಂಬಲಿಗರ ಬಳಗ, ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರ ಸಂಘದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಗ್ರಂಥಾಲಯ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಗ್ರಾಮ ಪಂಚಾಯಿತಿಗಳಲ್ಲಿ ಅರಿವು ಕೇಂದ್ರಗಳನ್ನು ತೆರೆದು ಪುಸ್ತಕ ಓದುವ ವಾತಾವರಣ ಸೃಷ್ಟಿಸಲಾಗಿದೆ. ಅದನ್ನು ಸದುಪಯೋಗ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

ಬೀಚಿ ಗ್ರಂಥಾಲಯ ಬೆಂಬಲಿಗರ ಬಳಗದ ಅಧ್ಯಕ್ಷ ಸುರೇಶ ಅಂಗಡಿ ಮಾತನಾಡಿ, ‘ಗ್ರಂಥಾಲಯ ಸಪ್ತಾಹ ಅಂಗವಾಗಿ ವಾರ ಪೂರ್ತಿ ವಿವಿಧೆಡೆ ‘ಓದು ಜನಮೇಜಯ ಅಭಿಯಾನ’ದ ಮೂಲಕ ಪುಸ್ತಕ ವಿತರಿಸುತ್ತೇವೆ’ ಎಂದು ತಿಳಿಸಿದರು.

ಪುನೀತ್ ದೊಡ್ಡಮನಿ ಮಾತನಾಡಿದರು. ಶಾಖಾ ಗ್ರಂಥಾಲಯಾಧಿಕಾರಿ ಬಿ. ನಾರಾಯಣ್ ದಾಸ್, ಎಂ. ದಯಾನಂದ, ಬಿ. ಖಾಜಾ ಹುಸೇನ್, ಕುರಿ ಮಂಜುನಾಥ, ಕೆ. ದೊಡ್ಡಬಸಪ್ಪ, ನಾಗರಾಜ ಮಲ್ಕಿಒಡೆಯರ್, ಕೆ.ಎಂ. ವೀರೇಶ್, ಕೊಟ್ರೇಶ್, ಮುರುಳಿ, ಕೆ. ಡಯಾನ, ಶಾಂತಿಬಾಯಿ, ಗ್ರಂಥಾಲಯ ಸಿಬ್ಬಂದಿ ಹಣ್ಣಿ ಅಯ್ಯನಗೌಡ, ಸೊಪ್ಪಿನ ಮೀನಾಕ್ಷಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.