ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

Invest Karnataka: ಹೂಡಿದ್ದೆಷ್ಟು, ಉದ್ಯೋಗ ಸಿಕ್ಕಿದ್ದೆಷ್ಟು?

ಹಿಂದಿನ ಜಾಗತಿಕ ಹೂಡಿಕೆ ಸಮಾವೇಶದಲ್ಲಿ ಘೋಷಣೆಯಾಗಿದ್ದೇನು, ಆಗಿದ್ದೇನೆಂಬುದರ ಚರ್ಚೆ
Published : 13 ಫೆಬ್ರುವರಿ 2025, 6:59 IST
Last Updated : 13 ಫೆಬ್ರುವರಿ 2025, 6:59 IST
ಫಾಲೋ ಮಾಡಿ
Comments
57 ಒಡಂಬಡಿಕೆ, 6 ಕಂಪನಿಗಳಿಗೆ ಮಾತ್ರ ಅನುಮೋದನೆ
2022ರ ನವೆಂಬರ್‌ನಲ್ಲಿ ನಡೆದಿದ್ದ ‘ಇನ್ವೆಸ್ಟ್‌ ಕರ್ನಾಟಕ’ ಸಮಾವೇಶಕ್ಕೆ ಬಿಜೆಪಿ ಸರ್ಕಾರ ₹74.99 ಕೋಟಿ ಖರ್ಚು ಮಾಡಿತ್ತು. ಇದರಲ್ಲಿ ದೇಶ, ವಿದೇಶದ ಸುಮಾರು 15 ಸಾವಿರ ಪ್ರತಿನಿಧಿಗಳು ಭಾಗಹಿಸಿದ್ದರು. ಸಮಾವೇಶದ ಏಕಗವಾಕ್ಷಿ ಸಭೆಗಳಲ್ಲಿ 608 ಯೋಜನೆಗಳಿಗೆ ಅನುಮೋದನೆ ನೀಡಲಾಗಿತ್ತು. ಇವೆಲ್ಲವುಗಳಿಂದ ₹2.83 ಲಕ್ಷ ಕೋಟಿ ಬಂಡವಾಳ ಹೂಡಿಕೆಗೆ ನಿರ್ಧಾರವಾಗಿತ್ತು. ಇನ್ನೊಂದಡೆ, ಒಟ್ಟು 57 ಒಡಂಬಡಿಕೆಗಳಿಗೆ ಸಹಿ ಹಾಕಲಾಗಿತ್ತು. ಇದೆಲ್ಲದರಿಂದ ₹5.41ಲಕ್ಷ ಕೋಟಿ ಹೂಡಿಕೆ, 2.81ಲಕ್ಷ ಉದ್ಯೋಗ ಸೃಷ್ಟಿಯ ನಿರೀಕ್ಷೆ ಹೊಂದಲಾಗಿತ್ತು. ಸಮಾವೇಶ ನಡೆದು ಎರಡೂವರೆ ವರ್ಷಗಳಾಗುತ್ತಾ ಬಂದಿದೆ. 57 ಒಡಂಬಡಿಕೆಗಳಲ್ಲಿ ಅನುಮೋದನೆ ಸಿಕ್ಕಿರುವುದು 6 ಕಂಪನಿಗಳಿಗೆ ಮಾತ್ರ. ಇವುಗಳಿಂದ ಒಟ್ಟು ₹67,963 ಕೋಟಿ ಬಂಡವಾಳ ನಿರೀಕ್ಷೆ ಹೊಂದಲಾಗಿದೆ. 13,365 ಉದ್ಯೋಗ ಸಿಗುವ ಸಾಧ್ಯತೆಗಳಿವೆ. ಈ ಕಂಪನಿಗಳೂ ವಿವಿಧ ಇಲಾಖೆಗಳ ಅನುಮತಿ ಪಡೆಯುವ ಅನುಪಾಲನೆಯಲ್ಲಿ ತೊಡಗಿವೆ. ಈ ಕಂಪನಿಗಳೂ ಕಾರ್ಯರೂಪಕ್ಕೆ ಬರಲು ಕೆಲ ವರ್ಷಗಳೇ ಬೇಕಾಗುತ್ತವೆ.
‌ಹಿಂದಿನ ಸಮಾವೇಶದ ಒಡಂಬಡಿಕೆಗಳ ಸ್ಥಿತಿಗತಿಯ ಬಗ್ಗೆ ಸರ್ಕಾರ ನೀಡಿದ ಉತ್ತರ  ಸಮಾಧಾನ ತಂದಿಲ್ಲ. ಒಪ್ಪಂದಗಳು ಜಾರಿಯಾಗುವಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಸರ್ಕಾರ ಉತ್ತರವನ್ನೇ ಕೊಟ್ಟಿಲ್ಲ.
–ಹೇಮಲತಾ ನಾಯಕ್‌, ವಿಧಾನಪರಿಷತ್ ಸದಸ್ಯೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT