ಬಳ್ಳಾರಿ: ಬಳ್ಳಾರಿಯ ‘ಸುವಾನ್ ಸ್ಟೀಲ್ಸ್’ ಎಂಬ ಕಂಪನಿಯು ಗೋವಾದ ‘ಮಾಂಡವಿ ರಿವರ್ ಪೆಲೆಟ್ಸ್’ ಎಂಬ ಕಂಪನಿಗೆ ಸಾಗಿಸಲೆಂದು ಸಂಡೂರಿನ ಬನ್ನಿಹಟ್ಟಿ ರೈಲ್ವೆ ಸೈಡಿಂಗ್ಸ್ಗೆ ತಂದಿದ್ದ ಕಡಿಮೆ ಗುಣಮಟ್ಟದ ಅದಿರಿನಲ್ಲಿ 1268 ಟನ್ಗಳನ್ನು ಪಕ್ಕಕ್ಕಿಟ್ಟು, ಹಳೆಯ ಉತ್ತಮ ಗುಣಮಟ್ಟದ 1168 ಟನ್ ಅದಿರನ್ನು ರೈಲು ರೇಕ್ನ ಡಬ್ಬಿಗಳಿಗೆ ತುಂಬಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಸಂಡೂರು ನ್ಯಾಯಾಲಯದಲ್ಲಿ ದಾಖಲಿಸಿರುವ ಖಾಸಗಿ ದೂರು (ಪಿಸಿಆರ್)ನಲ್ಲಿ ಉಲ್ಲೇಖಿಸಿದ್ದಾರೆ.

ಈ ಪ್ರಕರಣದಲ್ಲಿ ಎರಡೂ ಕಂಪನಿಗಳನ್ನು ಆರೋಪಿಗಳನ್ನಾಗಿಸಲಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ನ್ಯಾಯಾಲಯದಲ್ಲಿ ದಾಖಲಿಸಿರುವ ಪಿಸಿಆರ್ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಶೇ 45ರಿಂದ 51ರ ಗ್ರೇಡ್ನ 4 ಸಾವಿರ ಟನ್ ಅದಿರನ್ನು ‘ಸುವಾನ್ ಸ್ಟೀಲ್ಸ್’ ಬಳ್ಳಾರಿ ತಾಲೂಕಿನ ಬೆಳಗಲ್ನ ತನ್ನ ಕೈಗಾರಿಕೆಯಿಂದ ರಸ್ತೆ ಮೂಲಕ ಬನ್ನಿಹಟ್ಟಿ ರೈಲ್ವೆ ಸೈಡಿಂಗ್ಸ್ಗೆ ಸಾಗಿಸಲು ಪರವಾನಗಿ ಪಡೆದಿತ್ತು. ಇದಕ್ಕಾಗಿ 206 ಟ್ರಿಪ್ ಶೀಟ್ಗಳನ್ನು ಪಡೆದಿತ್ತು. ನಿಗದಿಯಂತೆ 4 ಸಾವಿರ ಟನ್ ಅದಿರನ್ನು ರೈಲ್ವೆ ಸೈಡಿಂಗ್ಸ್ಗೆ ಸಾಗಿಸಿತ್ತು ಎಂದು ಡಿಎಂಜಿ ತನ್ನ ಪಿಸಿಆರ್ನಲ್ಲಿ ಉಲ್ಲೇಖಿಸಿದೆ.

ಇದರೊಂದಿಗೆ 11 ಸಾವಿರ ಟನ್ ಸಾಗಿಸಲು ಪರವಾನಗಿ ಪಡೆಯಲಾಗಿದೆ, ಆದರೆ, ಕಡಿಮೆ ಪ್ರಮಾಣದ ಅದಿರನ್ನು ಸೈಡಿಂಗ್ಸ್ಗೆ ಸಾಗಿಸಲಾಗಿದೆ, ಟ್ರಿಪ್ ಶೀಟ್ಗಳಲ್ಲಿ ವ್ಯತ್ಯಾಸವಾಗಿದೆ, ಕಡಿಮೆ ಪ್ರಮಾಣದ ಅದಿರನ್ನು ಬನ್ನಿಹಟ್ಟಿ ರೈಲ್ವೆ ಸೈಡಿಂಗ್ ತರಲಾಗಿದೆ, ಎಂಬ ಕೆಲ ಪೊಲೀಸ್ ಅಧಿಕಾರಿಗಳು ಮತ್ತು ಸ್ಥಳೀಯರ ವಾದಗಳು ಮೂಲೆ ಸೇರಿವೆ.

ರೈಲು ರೇಕ್ ಡಬ್ಬಿಗಳಿಗೆ ಅದಿರು ತುಂಬುವಾಗ ಡಬ್ಬಿಯೊಂದರಲ್ಲಿ ಕಡಿಮೆ ಗುಣಮಟ್ಟದ ಅದಿರಿನ ಜತೆಗೆ, ಉತ್ತಮ ಗುಣಮಟ್ಟದ ಅದಿರು ಕೂಡ ಇತ್ತು. ಇದು ‘ಇನ್ನೊಂದು ಮಾಹಿತಿ’ಯಿಂದ ತಿಳಿಯಿತು ಎಂದು ಪಿಸಿಆರ್ನಲ್ಲಿ ಸೇರಿಸಲಾಗಿದೆ. ಆದರೆ, ಆ ಇನ್ನೊಂದು ಮಾಹಿತಿ ಯಾವುದು ಎಂಬುದನ್ನು ಖಚಿತಪಡಿಸಿಲ್ಲ.

ಮಾಹಿತಿ ಹಿನ್ನೆಲೆಯಲ್ಲಿ ರೈಲ್ವೆ ಸೈಡಿಂಗ್ನ ಈಶಾನ್ಯ ಭಾಗದಲ್ಲಿ ಪರಿಶೀಲನೆ ನಡೆಸಲಾಯಿತು. ಅಲ್ಲಿ ಕಂಪನಿಯು ತಾನು ತಂದ ಅದಿರನ್ನು ಪಕ್ಕಕ್ಕಿಟ್ಟಿತ್ತು. ಬದಲಿಗೆ ರೈಲ್ವೆ ಸೈಡಿಂಗ್ನಲ್ಲಿ ಈ ಹಿಂದೆ ಅದಿರು ತುಂಬುತ್ತಿದ್ದಾಗ ಹೊರಗೆ ಚೆಲ್ಲಲ್ಪಟ್ಟು, ಒಂದು ಕಡೆ ಗುಡ್ಡೆ ಹಾಕಿದ್ದ ಅದಿರನ್ನು ಕಳ್ಳತನದಿಂದ ಕಂಪನಿಯು ತುಂಬಿದೆ. ಇದರ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಲಾಗುತ್ತಿದೆ ಎಂದು ಪಿಸಿಆರ್ನಲ್ಲಿ ಹೇಳಲಾಗಿದೆ.

ಈ ಕೃತ್ಯದ ಪಂಚನಾಮೆಗೆ ‘ಸ್ಥಳೀಯರು’ನಿರಾಕರಿಸಿದರು ಎಂದು ಹೇಳಲಾಗಿದೆ. ಕಡಿಮೆ ಗುಣಮಟ್ಟದ ಅದಿರಿನ ಜತೆಗೆ, ಉತ್ತಮ ಗುಣಮಟ್ಟದ ಅದಿರನ್ನು ತುಂಬಲಾಗುತ್ತಿದೆ ಎಂದು ‘ಮಾಹಿತಿ’ ನೀಡಿದವರು ಪಂಚರಾಗಲು ನಿರಾಕರಿಸಿದ್ದು ಯಾಕೆ ಎಂಬ ಪ್ರಶ್ನೆಯೂ ಸದ್ಯ ಎದುರಾಗಿದೆ.

ಸದ್ಯ, ಗೋವಾಕ್ಕೆ ಸಾಗಿಸಲೆಂದು ಸುವಾನ್ ಸ್ಟೀಲ್ ಕಂಪನಿ ಬನ್ನಿಹಟ್ಟಿ ರೈಲ್ವೆ ಸೈಡಿಂಗ್ಗೆ ತಂದಿದ್ದ ಒಟ್ಟು ಅದಿರನ ಪೈಕಿ 1268 ಟನ್ ತುಂಬದೇ ಉಳಿದಿದ್ದು, ಅದಕ್ಕೆ ಭದ್ರತೆ ನೀಡಲು ರೈಲ್ವೆ ಅಧಿಕಾರಿಗಳು ನಿರಾಕರಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಅದಕ್ಕೆ ಭದ್ರತೆ ಒದಗಿಸಲು ರೈಲ್ವೆ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದೂ ಡಿಎಂಜಿ ಅಧಿಕಾರಿಗಳು ನ್ಯಾಯಾಲಯವನ್ನು ಕೋರಿದ್ದಾರೆ. ಜತೆಗೆ ಪ್ರಕರಣವನ್ನು ಪೊಲೀಸ್ ಇಲಾಖೆಗೆ ವರ್ಗಾಯಿಸಬೇಕು ಎಂದೂ ಕೋರಲಾಗಿದೆ.

ದೂರು: ಗೃಹ, ಗಣಿ ಇಲಾಖೆಗೆ ವರ್ಗಾವಣೆ

ಬನ್ನಿಹಟ್ಟಿ ರೈಲ್ವೆ ಸೈಡಿಂಗ್ನಲ್ಲಿ ಅಕ್ರಮ ಅದಿರು ಸಾಗಾಣಿಕೆ ನಡೆದಿದೆ ಎಂಬ ಆರೋಪ ಮತ್ತು ಇದರಲ್ಲಿ ಕೆಲ ಪೊಲೀಸರ ಪಾತ್ರವಿದೆ ಎಂಬುದರ ಕುರಿತು ಜನಸಂಗ್ರಾಮ ಪರಿಷತ್ತು ರಾಜ್ಯ ಪೊಲೀಸ್ ಮಹಾ ನಿರ್ದೇಶಕರು –ಆರಕ್ಷಕ ಮಹಾನಿರೀಕ್ಷಕರು ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮಂಗಳವಾರ ಪತ್ರ ಬರೆದಿದೆ.

ಕಾನೂನುಬದ್ಧವಾಗಿ ನಡೆಯುತ್ತಿರುವ ಗಣಿಗಾರಿಕೆಗೆ ಕೆಲವು ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಹಾಗೂ ಹಣದ ಬೇಡಿಕೆ ಮಾಡುತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಘಟನೆಯ ತನಿಖೆಗೆ ವಿಶೇಷ ತಂಡ ರಚಿಸಿ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪರಿಷತ್ ಆಗ್ರಹಿಸಿದೆ.

ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಈ ಪತ್ರವನ್ನು ಮರಳಿ ಪೊಲೀಸ್ ಇಲಾಖೆಗೆ ಮತ್ತು ಗಣಿ ಇಲಾಖೆ ಕಾರ್ಯದರ್ಶಿಗೆ ವರ್ಗಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.