ಕಲ್ಯಾಣ ಕರ್ನಾಟಕ ಉತ್ಸವ ಎಂಬುದು ಈ ಭಾಗದ ಏಳು ಜಿಲ್ಲೆಗಳ ಮತ್ತೊಂದು ಸ್ವಾತಂತ್ರ್ಯೋತ್ಸವ ಎಂದೇ ಪರಿಗಣಿತವಾಗಿದೆ. ಇಂಥ ಮಹತ್ವದ ಉತ್ಸವಕ್ಕೆ ಜಿಲ್ಲೆಯ ಯಾವೊಬ್ಬ ಶಾಸಕರೂ ಪಾಲ್ಗೊಂಡಿರಲಿಲ್ಲ. ಆಮಂತ್ರಣ ಪತ್ರಿಕೆಯಲ್ಲಿ ಮಾತ್ರ ಎಲ್ಲ ಶಾಸಕರ ಹೆಸರುಗಳನ್ನೂ ಮುದ್ರಿಸಲಾಗಿತ್ತು. ಸಮಾರಂಭದ ಅಧ್ಯಕ್ಷತೆಯನ್ನು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ವಹಿಸುವುದಾಗಿ ಆಮಂತ್ರಣ ಪತ್ರಿಕೆಯಲ್ಲಿ ಉಲ್ಲೇಖಿಸಲಾಗಿತ್ತು. ಆದರೆ ಅವರೂ ಗೈರಾಗಿದ್ದರು. ಈ ಮೂಲಕ ಅಧ್ಯಕ್ಷರಿಲ್ಲದೇ ಉತ್ಸವ ಜರುಗಿತು. ಮೇಯರ್ ಮುಲ್ಲಂಗಿ ನಂದೀಶ್ ಅವರು ಕಾರ್ಯಕ್ರಮ ಪೂರ್ಣಗೊಳ್ಳಲು ಇನ್ನು ಅರ್ಧ ಗಂಟೆ ಇರುವಾಗ ಆಗಮಿಸಿದರು.