ಸಂಡೂರು (ಬಳ್ಳಾರಿ): ಚಲನಚಿತ್ರ ನಟ ಕಿಚ್ಚ ಸುದೀಪ್ ಅವರ ಅಭಿಮಾನಿ ಬಳಗದ ಸದಸ್ಯರು ತಾಲ್ಲೂಕಿನ ಬಂಡ್ರಿ ಗ್ರಾಮದಲ್ಲಿ ಗುರುವಾರ ಕೋಣದ ಮರಿಯನ್ನು ಸಾರ್ವಜನಿಕವಾಗಿ ಕಡಿದು, ಅದರ ರಕ್ತವನ್ನು ಕಿಚ್ಚ ಸುದೀಪ್ ಅವರ ಭಾವಚಿತ್ರಕ್ಕೆ ಎರಚುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಸದಾ ಜನನಿಬಿಡ ಸ್ಥಳವಾಗಿರುವ ಗ್ರಾಮದ ಮಧ್ಯದ ವೃತ್ತದಲ್ಲಿ ಈ ರೀತಿ ಕೋಣದ ಮರಿಯನ್ನು ಕಡಿದು ಕೇಕೆ ಹಾಕುತ್ತಿರುವ ದೃಶ್ಯಗಳು ವಿಡಿಯೋದಲ್ಲಿವೆ.

ಕೆಲವು ಕಡೆಗಳಲ್ಲಿ ಸುದೀಪ್ ಅವರ ಹುಟ್ಟು ಹಬ್ಬದ ಅಂಗವಾಗಿ ರಕ್ತ ದಾನದಂತಹ ಉತ್ತಮ ಕಾರ್ಯಗಳನ್ನು ನಡೆಸಲಾಗಿದೆ. ಆದರೆ, ಇಲ್ಲಿ ಪ್ರಾಣಿಯೊಂದನ್ನು ಬಲಿ ನೀಡಿ, ಭಾವಚಿತ್ರಕ್ಕೆ ರಕ್ತವನ್ನು ಎರಚಿದ್ದರ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.

‘ಘಟನೆ ಕುರಿತು ಕೂಡ್ಲಿಗಿ ಪೊಲೀಸರಿಗೆ ತಿಳಿಸಲಾಗಿದೆ. ಪೊಲೀಸರು ಗ್ರಾಮಕ್ಕೆ ತೆರಳಿ, ವಿಡಿಯೊ ಆಧಾರದ ಮೇಲೆ ಪ್ರಕರಣದಲ್ಲಿ ಭಾಗಿಯಾದವರನ್ನು ಪತ್ತೆ ಹಚ್ಚುವ ಕಾರ್ಯ ನಡೆಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಎಫ್.ಐ. ಆರ್ ದಾಖಲಿಸಲಾಗುವುದು’ ಎಂದು ತಹಶೀಲ್ದಾರ್ ಎಚ್.ಜೆ. ರಶ್ಮಿ ತಿಳಿಸಿದರು.

ಈ ಘಟನೆಗೆ ಸಂಬಂಧಪಟ್ಟಂತೆ 25 ಆರೋಪಿಗಳ ವಿರುದ್ಧ ಕೂಡ್ಲಿಗಿ ಠಾಣೆಯ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.