ರಾಮಗಢಕ್ಕೆ ಸವಲತ್ತುಗಳ ಪ್ರಸ್ತಾಪ ಇಲ್ಲ
ಗಣಿಪೀಡಿತ ರಾಮಗಢ ಸ್ಥಳಾಂತರದ ಕುರಿತು ಈಚೆಗೆ ಭಾರಿ ಚರ್ಚೆಗಳಾಗಿದ್ದವು. ಗ್ರಾಮಕ್ಕೆ ತೆರಳಲು ಸೂಕ್ತ ರಸ್ತೆ ಇಲ್ಲದಿರುವುದು, ಗ್ರಾಮದಲ್ಲಿ ಮೂಲಸೌಕರ್ಯಗಳ ಕೊರತೆ ತೀವ್ರವಾಗಿ ಕಾಡುತ್ತಿರುವುದರ ಬಗ್ಗೆ ಮಾಧ್ಯಮಗಳೂ ಗಮನ ಸೆಳೆದಿದ್ದವು. ಆದರೆ, ಈ ಗ್ರಾಮಕ್ಕೆ ಯಾವುದೇ ಸವಲತ್ತು ನೀಡಲು ಕೆಎಂಇಆರ್‌ಸಿ ವಿಫಲವಾಗಿದೆ.
ಇದರ ಜತೆಗೆ ಗಣಿಯಿಂದ ತೀವ್ರವಾಗಿ ಬಾಧಿತವಾಗಿರುವ ಕಮ್ಮತ್ತೂರಿನಂಥ ಗ್ರಾಮಕ್ಕೂ ಯಾವುದೇ ಯೋಜನೆಗಳನ್ನು ಕೆಎಂಇಆರ್‌ಸಿ ಪ್ರಸ್ತಾಪಿಸಿಲ್ಲ.