ಕೂಡ್ಲಿಗಿ: ಕೂಡ್ಲಿಗಿ ಕ್ಷೇತ್ರದ 74 ಕೆರೆ ತುಂಬಿಸುವ ಮಹತ್ವಕಾಂಕ್ಷೆಯ ಯೋಜನೆ ನ. 9ರಂದು ಲೋಕಾರ್ಪಣೆಯಾಗಲಿದ್ದು, ಜತೆಗೆ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ 12ಕ್ಕೂ ಹೆಚ್ಚು ಸಚಿವರು ಪಟ್ಟಣಕ್ಕೆ ಬರುವ ಹಿನ್ನಲೆಯಲ್ಲಿ ಪಟ್ಟಣದಲ್ಲಿ ವಿವಿಧ ಸಿದ್ಧತೆಗಳು ಭರದಿಂದ ಸಾಗಿವೆ.

ಕಾರ್ಯಕ್ರಮದ ಅಂಗವಾಗಿ ಶಾಸಕರ ಜನ ಸಂಪರ್ಕ ಕಚೇರಿ ಬಳಿ ಬೃಹತ್ ವೇದಿಕೆ ನಿರ್ಮಿಸಲಾಗಿದೆ. 50 ಸಾವಿರಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದ್ದು, ಎಲ್ಇಡಿ ವಾಲ್ಗಳನ್ನು ಅಳವಡಿಸಲಾಗಿದೆ.

ವೇದಿಕೆಯ ಹಿಂಭಾಗದಲ್ಲಿನ ಚೋರನೂರು ರಸ್ತೆಯ ಪಕ್ಕದಲ್ಲಿ ಎರಡು ಹ್ಯಾಲಿ ಪ್ಯಾಡ್ ನಿರ್ಮಿಸಿದ್ದು, ಜನರನ್ನು ಕರೆ ತರುವ ವಾಹನಗಳನ್ನು ನಿಲ್ಲಿಸಲು ಮಹಾದೇವ ಮೈಲಾರ ಕ್ರೀಡಾಂಗಣ ಹಾಗೂ ಗುಡೇಕೋಟೆ ರಸ್ತೆಯ ಅಕ್ಕ ಪಕ್ಕದಲ್ಲಿನ ಹೊಲಗಳನ್ನು ಸಮತಟ್ಟು ಮಾಡಿ ಸಿದ್ದಪಡಿಸಲಾಗಿದೆ.

ಗುಡೇಕೋಟೆ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಿ ಡಾಂಬೀರಿಕರಣ ಮಾಡಿದ್ದು, ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳ ಅಕ್ಕಪಕ್ಕದಲ್ಲಿ ಜೆಸಿಬಿಗಳನ್ನು ಬಳಸಿ, ಗಿಡಗಂಟಿಗಳನ್ನು ಕಿತ್ತು ಸ್ವಚ್ಚ ಮಾಡಲಾಗುತ್ತಿದೆ.

ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ವೃತ್ತದ ವರೆಗೂ ಪಾದಾಚಾರಿ ಮಾರ್ಗ ಕಲ್ಪಿಸಲು, ಸಿಮೆಂಟ್ ಸ್ಲಾಬ್ಗಳನ್ನು ಹಾಕಿ ಸುವ್ಯವಸ್ಥಿತೆ ಮಾಡಲಾಗುತ್ತಿದೆ. ಆದರೆ ಕಾಮಗಾರಿ ಅಲ್ಲಲ್ಲಿ ಆಮೆಗತಿಯಲ್ಲಿ ಸಾಗಿದೆ.

ರಸ್ತೆಗಳ ಪಕ್ಕದ ಚರಂಡಿಗಳು ಸಹ ಸ್ವಚ್ಛತೆ ಕಾಣದೆ ಎಷ್ಟು ವರ್ಷಗಳಾಗಿದ್ದವು. ಮುಖ್ಯಮಂತ್ರಿ ಆಗಮನದ ಹಿನ್ನೆಲೆಯಲ್ಲಿ ಈಗ ಪಾದಚಾರಿ ಮಾರ್ಗದ ಕಾಮಗಾರಿ ಸಂಪೂರ್ಣವಾಗಿದೆ. ಚರಂಡಿಗಳು ಸ್ವಚ್ಛವಾಗಿವೆ. ಬೀದಿ ದೀಪಗಳು ಬೆಳಕು ಕಂಡಿವೆ. ಗಣ್ಯರನ್ನು ಸ್ವಾಗತಿಸುವ ಫ್ಲೆಕ್ಸ್ಗಳು ಎಲ್ಲೆಡೆ ರಾರಾಜಿಸುತ್ತಿವೆ.

ನಾಳೆ ಸಿ.ಎಂ ಆಗಮನ

ಹರಪನಹಳ್ಳಿ: ವಿವಿಧ ಕಾರ್ಯಕ್ರಮಗಳಿಗಾಗಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನ.9ರಂದು ಪ್ರವಾಸ ಕೈಗೊಂಡಿದ್ದಾರೆ. ಭಾನುವಾರ ಬೆಳಿಗ್ಗೆ ಬೆಂಗಳೂರಿನಿಂದ 10.50ಕ್ಕೆ ಬಳ್ಳಾರಿ ಜಿಲ್ಲೆಯ ತೋರಣಗಲ್ಲು ತಲುಪುತ್ತಾರೆ. ಅಲ್ಲಿಂದ ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ಎಚ್.ಪಿ.ಎಸ್ ಕಾಲೇಜು ಮೈದಾನದಲ್ಲಿ ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಅವರ ಪುತ್ರ ಪಿ.ಟಿ.ಭರತ್ ಆರತಕ್ಷತೆಯಲ್ಲಿ ಭಾಗವಹಿಸುವರು. ಕೆರೆ ತುಂಬಿಸುವ ಯೋಜನೆ ಲೋಕಾರ್ಪಣೆ ಕಾರ್ಯಕ್ರಮದ ಬಳಿಕ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಅಲ್ಲಿಂದ ತೋರಣಗಲ್ಲಿಗೆ ತೆರಳುವರು ಎಂದು ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯ ಅಧಿಕಾರಿ ಕೆ.ಚಿರಂಜೀವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜನರ ಬಹುದಿನಗಳ ಮಹತ್ವಕಾಂಕ್ಷೆಯ ಯೋಜನೆ ಸಾಕರಗೊಳ್ಳುತ್ತಿರುವುದು ಸಂತಷ ಮೂಡಿಸಿದೆ. ಕಾರ್ಯಕ್ರಮವನ್ನು ಯಶಸ್ವಿಯಾಗಿಸಲು ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ
-ಡಾ.ಶ್ರೀನಿವಾಶ್ ಎನ್.ಟಿ., ಶಾಸಕ ಕೂಡ್ಲಿಗಿ ವಿಧಾನಸಭಾ ಕ್ಷೇತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.