ಕುಡತಿನಿ (ತೋರಣಗಲ್ಲು): ‘ಪಟ್ಟಣದ ಸುತ್ತಲಿನ ಸಣ್ಣ, ಬೃಹತ್ ಕೈಗಾರಿಕೆಗಳಿಂದ ನಿರಂತರವಾಗಿ ಕಲುಷಿತ ದೂಳು ಬರುತ್ತಿದೆ. ಜನರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಕೈಗಾರಿಕೆಗಳಲ್ಲಿ ದೂಳು ನಿಯಂತ್ರಣ ಸಾಧನಗಳನ್ನು ಅಳವಡಿಸಿಕೊಳ್ಳುವಂತೆ ಮಾಲೀಕರಿಗೆ ಆದೇಶ ನೀಡಲಾಗುವುದು’ ಎಂದು ಕುಡತಿನಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಬಸಮ್ಮ ವಂದವಾಗಿಲ ಚಂದ್ರಪ್ಪ ಹೇಳಿದರು.

ಇಲ್ಲಿನ ಪಟ್ಟಣ ಪಂಚಾಯಿತಿಯ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಪಟ್ಟಣದಲ್ಲಿ ಕುಡಿಯುವ ನೀರು ಸೇರಿದಂತೆ ಇತರೆ ಮೂಲಸೌಲಭ್ಯಗಳಿಗೆ ಆದ್ಯತೆ ನೀಡಲಾಗುವುದು’ ಎಂದು ತಿಳಿಸಿದರು.

‘ಕುಡತಿನಿ ಪಟ್ಟಣದಲ್ಲಿ ಭೂಸಂತ್ರಸ್ತರು 620 ದಿನಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದು ಅವರ ಬೇಡಿಕೆಗಳನ್ನು ಶೀಘ್ರವಾಗಿ ಈಡೇರಿಸಲು ಸಂಸದರ ಮೂಲಕ ಸರ್ಕಾರಕ್ಕೆ ಒತ್ತಾಯಿಸಲಾಗುವುದು’ ಎಂದರು.

ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಕನ್ನಿಕೇರಿಪಂಪಾಪತಿ, ಸದಸ್ಯರಾದ ವಿ.ರಾಜಶೇಖರ್, ವೆಂಕರಮಣಬಾಬು, ರಾಮಲಿಂಗಪ್ಪ, ಮುಖಂಡರಾದ ವಿಸಿಕೆ ಚಂದ್ರಪ್ಪ, ಗೋಪಾಲ್, ಕೃಷ್ಣಪ್ಪ, ಜಿನ್ನದಭೀಮೇಶ್, ವಿ.ಬಸವರಾಜ, ಈರಣ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.