ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಪ್ಲಿ | ‘ಅಂಬೇಡ್ಕರ್ ಆದರ್ಶ ಅಳವಡಿಸಿಕೊಳ್ಳಿ’

Published 6 ಡಿಸೆಂಬರ್ 2023, 13:37 IST
Last Updated 6 ಡಿಸೆಂಬರ್ 2023, 13:37 IST
ಅಕ್ಷರ ಗಾತ್ರ

ಕಂಪ್ಲಿ: ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಕರ್ನಾಟಕ ಅಸ್ಪೃಶ್ಯರ ವಿಮೋಚನಾ ಸಮಿತಿಯಿಂದ ಬುಧವಾರ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನ ಆಚರಿಸಲಾಯಿತು.

ಸಮಿತಿ ರಾಜ್ಯ ಉಪಾಧ್ಯಕ್ಷ ಕೆ. ಲಕ್ಷ್ಮಣ ಮಾತನಾಡಿ, ‘ಅಂಬೇಡ್ಕರ್ ಅವರಿಗೆ ಕೇವಲ ಪೂಜೆ ಸಲ್ಲಿಸಿದರೆ ಸಾಲದು. ನಾವು ಅವರ ತತ್ವ ಆದರ್ಶ, ಸಿದ್ಧಾಂತಗಳನ್ನು ಅಳವಡಿಸಿಕೊಂಡಾಗ ಈ ದಿನಾಚರಣೆಗೆ ಅರ್ಥ ಬರುತ್ತದೆ’ ಎಂದು ತಿಳಿಸಿದರು.

ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಎನ್. ಬುಜ್ಜಿಕುಮಾರ್, ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಎಂ.ಸಿ. ಮಾಯಪ್ಪ, ಸಿ.ಆರ್. ಹನುಮಂತ, ವಿ. ಗೋವಿಂದಪ್ಪ, ಸಿ. ವೆಂಕಟೇಶ, ಜಿ. ರಾಮಣ್ಣ, ಬಿ. ದೇವೇಂದ್ರ, ಜಿ. ಸುಧಾಕರ, ವಿ. ವಿದ್ಯಾಧರ, ಸತ್ಯಪ್ಪ, ಎಚ್. ಸೋಮಪ್ಪ, ಪರಶುರಾಮ, ಎಲ್. ಭಗವಾನ್, ಪರಮೇಶ, ಸೂರಿ, ಬಳ್ಳಾರಿ ಮಾಧವ, ತಿಮ್ಮಪ್ಪ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT