’ನನಗೆ ಕೆಎಂಎಫ್ ಪ್ರಾತಿನಿಧ್ಯ’
ವಿಜಯನಗರ–ಬಳ್ಳಾರಿ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಅವರಿಗೆ ಈ ಚುನಾವಣೆ ಜವಾಬ್ದಾರಿ ವಹಿಸಲಾಗಿತ್ತು. ಕೊಪ್ಪಳಕ್ಕೆ ಅಧ್ಯಕ್ಷ ಸ್ಥಾನ ರಾಯಚೂರಿಗೆ ಉಪಾಧ್ಯಕ್ಷ ಸ್ಥಾನ ವಿಜಯನಗರಕ್ಕೆ ಕೆಎಂಎಫ್ ಪ್ರಾತಿನಿಧ್ಯ ಕೊಡಬೇಕು ಎಂದು ಪಕ್ಷ ತೀರ್ಮಾನಿಸಿದೆ. ಅದರಂತೆ ನಾನು ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತೇನೆ’ ಎಂದು ಮಾಜಿ ಅಧ್ಯಕ್ಷ ಭೀಮ ನಾಯ್ಕ ಹೇಳಿದರು. ‘ರಾಘವೇಂದ್ರ ಹಿಟ್ನಾಳ್ ಅಧ್ಯಕ್ಷರಾಗಿರುವುದಕ್ಕೆ ನನಗೆ ಅಸಮಾಧಾನವೇನೂ ಇಲ್ಲ. ನನಗೆ ಠಕ್ಕರ್ ಕೊಡಲು ಯಾರಿಗೂ ಶಕ್ತಿ ಇಲ್ಲ. ಪಕ್ಷದ ತೀರ್ಮಾನಕ್ಕೆ ತಲೆಬಾಗಿದ್ದೇನೆ. ಇದೆಲ್ಲವೂ ಪೂರ್ವ ಒಪ್ಪಂದ. ಜಿಲ್ಲಾವಾರು ಅಧಿಕಾರ ಹಂಚಿಕೆಯಾಗಿದೆ’ ಎಂದು ತಿಳಿಸಿದರು.