ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಪನಹಳ್ಳಿ: ಮಾರ್ಚ್‌ 27ರಿಂದ ರಂಗ ಪಯಣ ಆರಂಭ

Published 26 ಮಾರ್ಚ್ 2024, 14:30 IST
Last Updated 26 ಮಾರ್ಚ್ 2024, 14:30 IST
ಅಕ್ಷರ ಗಾತ್ರ

ಹರಪನಹಳ್ಳಿ: ವಿಶ್ವ ರಂಗಭೂಮಿ ದಿನಾಚರಣೆ ಪ್ರಯುಕ್ತ ಸ್ಥಳೀಯ ರಂಗಭೂಮಿ ಕಲಾವಿದರು ಹರಪನಹಳ್ಳಿ ಪಾಳೆಗಾರರ ಮೊದಲ ಅರಸ ‘ದಾದಯ್ಯ ನಾಯಕ’ ಮತ್ತು ‘ನಾಡು ಕಟ್ಟೋಣ ಬನ್ನಿ’ ನಾಟಕಗಳನ್ನು ಒಂದು ತಿಂಗಳ ಕಾಲ ಉಚಿತವಾಗಿ ಪ್ರದರ್ಶಿಸಲು ಸಿದ್ದತೆ ನಡೆಸಿದ್ದಾರೆ.

ಹರಪನಹಳ್ಳಿಯ ಸಮಸ್ತರು, ಸಂಪ್ರದಾಯ ಟ್ರಸ್ಟ್‌ ಮತ್ತು ಆದರ್ಶ ಮಹಿಳಾ ಮಂಡಳಿ ಸಹಯೋಗದಲ್ಲಿ ಮಾರ್ಚ್‌ 27ರಿಂದ ಏಪ್ರಿಲ್ 27ರ ವರೆಗೆ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ ರಂಗ ಪಯಣ ಜರುಗುವುದು. ಬುಧವಾರ ಸಂಜೆ 7ಕ್ಕೆ ಪಟ್ಟಣದ ಕಾಶಿಮಠ ಆವರಣದಲ್ಲಿ ನಾಟಕ ಉದ್ಘಾಟನೆಗೊಳ್ಳಲಿದೆ.

20 ನಿಮಿಷದ ಎರಡು ನಾಟಕಗಳನ್ನು ಸ್ಥಳೀಯ ರಂಗಭೂಮಿ ಕಲಾವಿದರು ಪ್ರದರ್ಶಿಸುವರು. ನಾಟಕ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದು ಪ್ರೋತ್ಸಾಹಿಸಬೇಕು. ನಿಗದಿತ ಸಮಯಕ್ಕೆ ನಾಟಕ ಆರಂಭವಾಗುತ್ತದೆ ಎಂದು ಸಮಸ್ತರು ಸಂಸ್ಥಾಪಕ ಅಧ್ಯಕ್ಷ ಬಿ.ಪರಶುರಾಮ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT