ಕೂಡ್ಲಿಗಿ: ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (ಆರ್ಎಸ್ಎಸ್) 100 ವರ್ಷ ತುಂಬಿದ ಪ್ರಯುಕ್ತ ಭಾನುವಾರ ಸಂಜೆ ಪಟ್ಟಣದಲ್ಲಿ ಗಣವೇಷಧಾರಿಗಳಿಂದ ನಡೆದ ಆಕರ್ಷಕ ಪಥಸಂಚಲನ ಯಶಸ್ವಿಯಾಗಿ ಸಂಪನ್ನಗೊಂಡಿತು.

ಬೆಂಗಳೂರು ರಸ್ತೆಯಲ್ಲಿನ ಕೊತ್ತಲಾಂಜನೇಯ ಜಮೀನನಲ್ಲಿನ ಸಂತೆ ಮೈದಾನದಿಂದ ಹೊರಟ ಪಥ ಸಂಚಲನ ಪಾದಗಟ್ಟೆ, ಮದಕರಿ ವೃತ್ತ, ಕೊಟ್ಟೂರು ರಸ್ತೆ, ರಾಮನಗರ, ಅಂಬೇಡ್ಕರ್ ನಗರ, ಪೇಟೆ ಬಸವೇಶ್ವರ ದೇವಸ್ಥಾನದ ಮುಂದಿನ ಹೊರಟು ಲಕ್ಷ್ಮೀ ಬಜಾರ ಮೂಲಕ ಅಂಜನೇಯ ದೇವಸ್ಥಾನದಿಂದ ವೆಂಕಟೇಶ್ವರ ದೇವಸ್ಥಾನದಿಂದ ಸಂಡೂರು ರಸ್ತೆ ಹಾದು ಅಂಬೇಡ್ಕರ್ ವೃತ್ತದಿಂದ ಗುಡೇಕೋಟೆ ರಸ್ತೆಯಲ್ಲಿ ಹೋಗಿ ಹಿರೇಮಠ ಕಲೊನಿ ಮೂಲಕ ಬಂದು ಪಟ್ಟಣದ ಹಿರೇಮಠದ ಆವರಣದಲ್ಲಿ ಸಂಪನ್ನಗೊಳಿಸಲಾಯಿತು.

ಮೆರವಣಿಗೆ ಸಂದರ್ಭದಲ್ಲಿ ದಾರಿಯುದ್ದಕ್ಕೂ ರಂಗೋಲಿ ಹಾಕಿದ್ದ ಮಹಿಳೆಯರು, ಮಕ್ಕಳು ಜನರು ಗಣದಾರಿಗಳಿಗೆ ಹಾಗೂ ಭಾರತ ಮೇತೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಜಯ ಘೋಷಗಳನ್ನು ಕೂಗಿದರು.

ಮಾಜಿ ಸಚಿವ ಶ್ರೀರಾಮುಲು, ಬಿಜೆಪಿ ಎಸ್ಟಿ ಮೋರ್ಚಾದ ರಾಜ್ಯಾಧ್ಯಕ್ಷ ಬಂಗಾರಿ ಹನುಮಂತು, ಆರ್ಎಸ್ಎಸ್ ಪ್ರಮುಖರಾದ ಆನಂತ ಪದ್ಮಾನಾಭ, ಡಾ .ಟಿ.ಎ.ಎಂ. ಶಾಂತಯ್ಯ, ಬಂಡ್ರಿ ವಿಜಯಕುಮಾರ್, ಹೊಂಬಾಳೆ ರೇವಣ್ಣ, ಸಚಿನ್ ಕುಮಾರ್, ವಿವೇಕಾನಂದ, ಪಿ.ಉಮೇಶ, ಬಿ.ಬಸವರಾಜ, ಡಿಎಸ್ಎಸ್ ಮುಖಂಡ ಎಸ್.ದುರುಗೇಶ್, ರಜನಿಕಾಂತ್, ರಾಮುಕಾಟ್ವಾ, ಗ್ಯಾಸ್ ತಿಪ್ಪೇಸ್ವಾಮಿ ಪಾಲ್ಗೊಂಡಿದ್ದರು.

ರಾಜ್ಯದಲ್ಲಿ ಉದ್ಭವಿಸಿರುವ ಸದ್ಯದ ಬೆಳವಣಿಗೆ ಹಿನ್ನೆಲೆಯಲ್ಲಿ ಸ್ವತಹ ಜಿಲ್ಲಾ ಪೊಲೀಸ್ ವರಿಷ್ಠಾಧಿಕರಿ ಎಸ್. ಜಾಹ್ನವಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.