ಸಂಡೂರು: ತಾಲ್ಲೂಕಿನ ಸುಲ್ತಾನಾಪುರ ಗ್ರಾಮದ ಬಳಿಯ ಬಿಟಿಪಿಎಸ್ ಕ್ರಾಸ್ನ ಲೇಬರ್ ಕಾಲೋನಿಯಲ್ಲಿ ಅನ್ಯರಾಜ್ಯದ ಕಾರ್ಮಿಕರ ನಡುವೆ ಪರಸ್ಪರ ಗಲಾಟೆ ನಡೆದು ಕೆಲ ಕಾರ್ಮಿಕರು ಬೆಂಕಿಯಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಶನಿವಾರ ನಡೆದಿದೆ.

ಮಧ್ಯಪ್ರದೇಶದ ಮೂಲದ ಕಾರ್ಮಿಕರಾದ ಉಮೇಶ್ಕುಮಾರ್ಕೇವೆಟ್, ದೇವಚಂದ್ಕೇವೆಟ್, ರಾಜನ್ಕುಮಾರ್ಕೇವೆಟ್ ಬೆಂಕಿಯಿಂದ ಗಾಯಗೊಂಡವರಾಗಿದ್ದು, ಪಶ್ಚಿಮಬಂಗಾಳ ಮೂಲದ ಕಾರ್ಮಿಕ ಸುಭಾಷ್ನಾಯಕ್ ಮತ್ತು ಮೇಲಿನ ಮೂರು ಜನ ಕಾರ್ಮಿಕರ ನಡುವೆ ವೈಯಕ್ತಿಕ ವಿಚಾರಗಳಿಗೆ ಪರಸ್ಪರ ಗಲಾಟೆ ಉಂಟಾಗಿದೆ.

ಸುಭಾಷ್ನಾಯಕ್ನು ಮೂರು ಜನ ಕಾರ್ಮಿಕರ ಮೇಲೆ ದ್ವೇಷ ಸಾಧಿಸಿ ಶನಿವಾರ ಬೆಳಗಿನ ಜಾವ ಕಾರ್ಮಿಕರು ಮಲಗಿದ್ದ ಕೋಣೆಗೆ ತೆರಳಿ, ಕಿಟಕಿಯ ಮೂಲಕ ಪೆಟ್ರೋಲ್, ಡಿಸೇಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಕಾರ್ಮಿಕರು ಮಲಗಿದ್ದ ಚಾಪೆಗೆ ಬೆಂಕಿ ಹತ್ತಿದ್ದರಿಂದ ಎಚ್ಚರಗೊಂಡು ರಕ್ಷಣೆಗಾಗಿ ಕೂಗಿಕೊಂಡಿದ್ದಾರೆ ತಕ್ಷಣ ಪಕ್ಕದ ಕೋಣೆಯಲ್ಲಿದ್ದ ಕೆಲ ಕಾರ್ಮಿಕರು ಬಂದು ಬೆಂಕಿನಂದಿಸಿದ್ದಾರೆ. ಮೂರು ಜನ ಕಾರ್ಮಿಕರನ್ನು ಬೆಂಕಿಯಿಂದ ರಕ್ಷಣೆ ಮಾಡಿದ್ದಾರೆ. ಮೂರು ಜನ ಕಾರ್ಮಿಕರಿಗೆ ಕೈ, ಕಾಲು, ಪಾದಗಳಿಗೆ ಸುಟ್ಟಗಾಯಗಳಾಗಿದ್ದರಿಂದ ಜಿಂದಾಲ್ ಸಂಜೀವಿನಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.

ಕಾರ್ಮಿಕ ಪ್ರಮೋದ್ಕುಮಾರ್ ನೀಡಿದ ದೂರು ಆಧರಿಸಿ ಕುಡತಿನಿ ಪೊಲೀಸ್ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಿಸಲಾಗಿದ್ದು, ಆರೋಪಿ ಸುಭಾಷ್ನಾಯಕ್ ಪತ್ತೆಗಾಗಿ ಹುಡುಕಾಟ ನಡೆಸಲಾಗಿದೆ ಎಂದು ಠಾಣೆಯ ಪೋಲಿಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.