ಸಿರಗುಪ್ಪ: ಮಹಿಳಾ ಸ್ವ ಸಹಾಯ ಸಂಘದಿಂದ ಸರ್ಕಾರವು ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುತ್ತಿದೆ ಎಂದು ಬಾಗೇವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಾಮಾಕ್ಷಮ್ಮ ಹೇಳಿದರು.

ತಾಲ್ಲೂಕಿನ ಬಾಗೇವಾಡಿ ಗ್ರಾಮ ಪಂಚಾಯತಿಯ ಆವರಣದಲಿ ಸೋಮವಾರ ನಡೆದ ಎನ್.ಆರ್.ಎಲ್.ಎಂ ಯೋಜನೆಯಡಿಯಲ್ಲಿ ಭತ್ತದ ನಾಡು ಸಂಜೀವಿನಿ ವನಧನ ವಿಕಾಸ ಕೇಂದ್ರದ ವತಿಯಿಂದ ಬಾಗೇವಾಡಿ ಗ್ರಾಮದ ಮಹಿಳಾ ಸಂಘದವರ ಅಣಬೆ ಮತ್ತು ಜೇನುತುಪ್ಪ ಉತ್ಪಾದನಾ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.

ಎನ್.ಆರ್.ಎಲ್.ಎಂ ಯೋಜನೆಯ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ರಾಜೇಂದ್ರ ಮಾತನಾಡಿ, ಭಾರತ ಸರ್ಕಾರವು ಎನ್.ಆರ್.ಎಲ್.ಎಂ ಯೋಜನೆಯಡಿಯಲ್ಲಿ ಗ್ರಾಮೀಣ ಭಾಗದ ಸ್ವಸಹಾಯ ಮಹಿಳಾ ಸಂಘದ ಸದಸ್ಯರಿಗೆ ಜೀವನೋಪಾಯಕ್ಕಾಗಿ ನೀಡುವ ವಿವಿಧ ಕರ ಕುಶಲ ವಸ್ತುಗಳ ತಯಾರಿಕೆ, ಅನೇಕ ಉತ್ಪನ್ನಗಳ ತಯಾರಿಸಿ ಮಾರಾಟ ಮಾಡಬೇಕು. ಇದರಿಂದ ಆದಾಯದ ಹೆಚ್ಚಿಸಿಕೊಳ್ಳಲು ನೇರವಾಗುತ್ತದೆ ಎಂದರು.

ತಾಲ್ಲೂಕು ಪಂಚಾಯತಿ ಸಹಾಯಕ ನಿರ್ದೇಶಕ ಬಸವರಾಜ್, ಬಾಗೇವಾಡಿ ವನಧನ ವಿಕಾಸ ಕೇಂದ್ರ ಅಧ್ಯಕ್ಷೆ ನಂದಿನಿ, ಸಾಯಿನಾಥ ಸಂಜೀವಿನಿ ಮಹಿಳಾ ಒಕ್ಕೂಟ ಅಧ್ಯಕ್ಷೆ ಲಕ್ಷ್ಮಿ ರೈತ ಸಂಪರ್ಕ ಕೇಂದ್ರ ಅಧಿಕಾರಿ ಪುರುಷೋತ್ತಮ್, ಎನ್.ಆರ್.ಎಲ್.ಎಂ ಯೋಜನೆಯ ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕ ಹನುಮನ ಗೌಡ, ಕೃಷಿಯೇತರ ತಾಲ್ಲೂಕು ವ್ಯವಸ್ಥಾಪಕ ಗೌಸಲ್ ಅಜೀಮ್, ಕೃಷಿ ಅಧಿಕಾರಿ ಮಹಾಂತೇಶ್ವರ, ವಲಯ ಮೇಲ್ವಿಚಾರಕ ಆಲಂ ಬಾಷ, ಕೌಶಲ್ಯ ವಲಯ ಮೇಲ್ವಿಚಾರಕ ಶೇಷಪ್ಪ, ಜಿ.ಪಿ.ಎಲ್.ಎಫ್ ಸಹಾಯಕಿ ಎನ್.ಹುಲಿಗೆಮ್ಮ, ಸಂಪನ್ನೂಲ ಅಧಿಕಾರಿಗಳಾದ ಯಶೋಧ, ಐಮಾವತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.