ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾನಹೊಸಹಳ್ಳಿ: ವಿದ್ಯುತ್ ಸ್ಪರ್ಶ; ಯುವಕ ಸಾವು

Published 13 ಜೂನ್ 2024, 14:03 IST
Last Updated 13 ಜೂನ್ 2024, 14:03 IST
ಅಕ್ಷರ ಗಾತ್ರ

ಕಾನಹೊಸಹಳ್ಳಿ: ಸಮೀಪದ ಮಾಕನಡಕು ಗ್ರಾಮದ ಹೊರವಲಯದಲ್ಲಿ ವಿದ್ಯುತ್ ಸ್ಪರ್ಶಿಸಿ ರೈತರೊಬ್ಬರು ಮೃತಪಟ್ಟಿರುವ ಘಟನೆ ಗುರುವಾರ ಸಂಭವಿಸಿದೆ.

ಬೆಳಗಟ್ಟೆ ಗ್ರಾಮದ ನಾಗರಾಜ(28) ಮೃತ ರೈತ. ಜಮೀನಿನಲ್ಲಿರುವ ಪಂಪ್ ಸೆಟ್‌ಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ವೇಳೆ ವಿದ್ಯುತ್ ಪ್ರವಹಿಸಿ ಸ್ಥಳದಲ್ಲಿ ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಆಪರಾಧ ವಿಭಾಗದ ಪಿಎಸ್ಐ ನಾಗರತ್ನ, ಚಿಕ್ಕಜೋಗಿಹಳ್ಳಿ ಜೆಸ್ಕಾಂ ಜೆ.ಇ. ಆನಂದ ಭೇಟಿ ನೀಡಿದ್ದಾರೆ.

ಈ ಸಂಬಂಧ ಅವರ ತಂದೆ ಶರಣಪ್ಪ ನೀಡಿದ ದೂರಿನನ್ವಯ ಕಾನಹೊಸಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT