ಹಾಂಗ್‌ಝೌ: ಭಾರತ ವನಿತೆಯರ ಹ್ಯಾಂಡ್‌ಬಾಲ್ ತಂಡವು ಬುಧವಾರ ನಡೆದ ಗುಂಪು ಹಂತದ ಎರಡನೇ ಪಂದ್ಯದಲ್ಲಿ 26–26ರಿಂದ ಹಾಂಗ್‌ಕಾಂಗ್ ವಿರುದ್ಧ ಡ್ರಾ ಸಾಧಿಸಿತು.
ಮೊದಲ ಪಂದ್ಯದಲ್ಲಿ ಭಾರತ ತಂಡವು 13–41 ಗೋಲುಗಳಿಂದ ಜಪಾನ್ ತಂಡದ ಎದುರು ಮುಗ್ಗರಿಸಿತ್ತು. ಈ ಪಂದ್ಯದಲ್ಲಿ ಉತ್ತಮ ಪೈಪೋಟಿ ನೀಡಿದರೂ ಜಯ ಒಲಿಯಲಿಲ್ಲ.
ಭಾರತದ ಪರ ಮೆನಿಕಾ, ನಿಧಿ ಶರ್ಮಾ, ಸುಷ್ಮಾ, ಪ್ರಿಯಾಂಕಾ ಠಾಕೂರ್, ಭಾವನಾ, ಜ್ಯೋತಿ ಶುಕ್ಲಾ ಮತ್ತು ಶಾಲಿನಿ ಠಾಕೂರ್ ಗೋಲು ದಾಖಲಿಸಿ ಗಮನ ಸೆಳೆದರು.
ಪಂದ್ಯದ ಕೊನೆಯಲ್ಲಿ ಹಾಂಗ್‌ಕಾಂಗ್ ತಂಡ ಒಂದು ಗೋಲುಗಳ ಮುನ್ನಡೆಯಲ್ಲಿತ್ತು. ಆದರೆ, ಕೇವಲ ಮೂರು ಸೆಕೆಂಡ್ ಬಾಕಿ ಇರುವಾಗ ಮೆನಿಕಾ ಚೆಂಡನ್ನು ಗುರಿ ಸೇರಿಸಿ, ಗೋಲನ್ನು ಸಮಬಲಗೊಳಿಸಿದರು.
ಭಾರತ ತಂಡವು ಶುಕ್ರವಾರ ಚೀನಾ ವಿರುದ್ಧ ಮತ್ತು ಶನಿವಾರ ನೇಪಾಳ ವಿರುದ್ಧ ಸೆಣಸಲಿದೆ.