ಬಳ್ಳಾರಿ: ಮಾಜಿ ಸಚಿವ ಶ್ರೀರಾಮುಲು ಅವರ ವಿರುದ್ಧ ಮಾತನಾಡುತ್ತಿರುವ ಶಾಸಕ ಜನಾರ್ದನ ರೆಡ್ಡಿ ಅವರ ವಿರುದ್ಧ ರಾಜ್ಯದಾದ್ಯಂತ ಚಳವಳಿ ರೂಪಿಸುವುದಾಗಿ ವಾಲ್ಮೀಕಿ ಸಮುದಾಯದ ಬಳ್ಳಾರಿ ಜಿಲ್ಲಾ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
.ಜನಾರ್ದನ ರೆಡ್ಡಿ vs ಶ್ರೀರಾಮುಲು | ‘ಮಾಜಿ’ ಗೆಳೆಯರ ‘ಸವಾಲ್–ಜವಾಬ್’.
ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮುದಾಯದ ಮುಖಂಡ ಜೋಳದರಾಶಿ ತಿಮ್ಮಪ್ಪ, ‘ಜನಾರ್ದನ ರೆಡ್ಡಿ ಅವರು ಶ್ರೀರಾಮುಲು ವಿರುದ್ಧ ‘ನೀನು ಕೀಳು ಜಾತಿಯವನು, ಕೊಡಲಿ ಹಿಡಿದುಕೊಂಡು ಬೀದಿಯಲ್ಲಿ ಓಡಾಡುತ್ತಿದ್ದವನು, ನಿನ್ನ ರಾಜಕೀಯ ಜೀವನ ರೂಪಿಸಿದ್ದು ನಾನು’ ಎಂದೆಲ್ಲ ಮಾತನಾಡಿದ್ದಾರೆ. ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು. ಜನಾರ್ದನ ರೆಡ್ಡಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು, ಜಾತಿ ನಿಂದನೆ ಪ್ರಕರಣ ದಾಖಲು ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿ ರಾಜ್ಯದ ಎಲ್ಲ ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿಗಳಿಗೆ ದೂರು ಕೊಡಲಾಗುವುದು’ ಎಂದರು.
.Karnataka Politics | ರೆಡ್ಡಿ ಜತೆಗಿನ ಮುನಿಸಿಗೆ ಕಾರಣ ಬಿಚ್ಚಿಟ್ಟ ಶ್ರೀರಾಮುಲು.
‘ಅದು ಸಫಲವಾಗದಿದ್ದರೆ ರಾಜ್ಯದಾದ್ಯಂತ ಚಳವಳಿ ರೂಪಿಸುತ್ತೇವೆ. ಅಭಿಯಾನ ಕೈಗೊಳ್ಳುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

‘ಜನಾರ್ದನ ರೆಡ್ಡಿ ಕ್ಷಮೆ ಕೇಳಬೇಕು, ಬಿಜೆಪಿಯಿಂದ ಅವರನ್ನು ಹೊರ ಹಾಕಬೇಕು. ಶ್ರೀರಾಮುಲು ಅವರಿಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರೇ ಬೆಂಬಲ ಸೂಚಿಸಿದ್ದಾರೆ. ಶ್ರೀರಾಮುಲು ಮನಸ್ಥಿತಿ ಏನು, ರೆಡ್ಡಿ ಮನಸ್ಥಿತಿ ಏನು ಎಂಬುದು ಪಕ್ಷಕ್ಕೂ ಗೊತ್ತಾಗಿದೆ. ನಾವು ರಾಮುಲು ಪರವಾಗಿ ಇರುತ್ತೇವೆ’ ಎಂದರು.
.ಸತೀಶ ಜಾರಕಿಹೊಳಿ ಮುಗಿಸಲು ನಾನ್ಯಾರು?: ಶ್ರೀರಾಮುಲು ತಿರುಗೇಟು .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.