ಬಳ್ಳಾರಿ: ‘ಶ್ರೀರಾಮುಲು ಅವರಿಗೆ ರಾಮಾಯಣ ಭೋದಿಸಿ ರಾಜಕೀಯದಲ್ಲಿ ಬೆಳೆಸಿದೆ’ ಎಂಬ ಶಾಸಕ ಜನಾರ್ದನ ರೆಡ್ಡಿ ಮಾತಿಗೆ ತಿರುಗೇಟು ನೀಡಿರುವ ಮಾಜಿ ಸಚಿವ ಶ್ರೀರಾಮುಲು ‘ಯಾರದ್ದೋ ಕೃಪಾ ಕಟಾಕ್ಷದಿಂದ ಗೆದ್ದವನಲ್ಲ ನಾನು’ ಎಂದು ಸ್ಪಷ್ಟಪಡಿಸಿದ್ದಾರೆ.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀರಾಮುಲು, ‘ನಾನು ಕಳಂಕ ರಹಿತವಾಗಿ ರಾಜಕಾರಣ ಮಾಡಿದ್ದೇನೆ. ಉಪ ಚುನಾವಣೆಯಲ್ಲೂ ನಿಷ್ಠೆಯಿಂದ ದುಡಿದಿದ್ದೇನೆ. ಅಪಮಾನವಾದಾಗ ನೋವಿನಿಂದ ಮಾತನಾಡಿದ್ದೇನೆ’ ಎಂದು ಹೇಳಿದರು.

‘ಸುಳ್ಳು ಎಂಬುದು ಬಲಾಢ್ಯರ ಬಳಿ ಇದ್ದಾಗ ಅದು ಸತ್ಯವಾಗುತ್ತದೆ. ದುರ್ಬಲರ ಬಳಿ ಸತ್ಯವಿದ್ದರೆ ಅದು ಸುಳ್ಳಾಗುತ್ತದೆ. ಎಲ್ಲ ಹಿರಿಯ ನಾಯಕರಿಗೂ ನಡೆದ ಸಂಗತಿ ತಿಳಿಸಿದ್ಧೇನೆ’ ಎಂದರು.

‘2018ರ ವಿಧಾನಸಭಾ ಚುನಾವಣೆ ವೇಳೆ ಮೊಳಕಾಲ್ಮೂರಿನಲ್ಲಿ ಮ್ಯಾಜಿಕ್ ಮಾಡಿ ನನ್ನನ್ನು ಗೆಲ್ಲಿಸಿದ್ದಾಗಿ ರೆಡ್ಡಿ ಹೇಳಿದ್ದಾರೆ. ಆ ಬಾರಿ ಪಕ್ಷ ನನನ್ನು ಎರಡು ಕ್ಷೇತ್ರದಲ್ಲಿ ನಿಲ್ಲಿಸಿತ್ತು. ಆದರೆ ಈತ ಬಂದು ಮ್ಯಾಜಿಕ್ ಮಾಡಿ ಗೆಲ್ಲಿಸಲು ಸಾಧ್ಯವೇ?, ಯಾರು ಯಾರನ್ನೂ ಗೆಲ್ಲಿಸಲು ಸಾಧ್ಯವಿಲ್ಲ. ನಾನು ಅಲ್ಲಿ ನಿಂತಿದ್ದರಿಂದಲೇ ಚಿತ್ರದುರ್ಗದಲ್ಲಿ ಹೆಚ್ಚು ಸ್ಥಾನ ಗೆಲ್ಲಲ್ಲಾಯಿತು. ಬದಾಮಿಯಲ್ಲಿ ನಿಂತಿದ್ದರಿಂದಲೇ ಬಾಗಲಕೋಟೆಯಲ್ಲಿ 5 ಕ್ಷೇತ್ರ ಗೆಲ್ಲಲು ಸಾಧ್ಯವಾಯಿತು. ಇವರ ಮ್ಯಾಜಿಕ್ ಏನೂ ನಡೆದಿಲ್ಲ’ ಎಂದು ತಿಳಿಸಿದರು.

‘ಜನಾರ್ದನ ರೆಡ್ಡಿ ನನ್ನನ್ನು ಕ್ರಿಮಿನಲ್ ಎಂದು ಬಿಂಬಿಸುತ್ತಿರುವುದು ಅವರ ಫ್ಯೂಡಲ್ ಮನಸ್ಥಿತಿಯನ್ನು ಪ್ರದರ್ಶಿಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಂದಿನ ನಿರ್ಧಾರ, ಬೇಡಿಕೆ ಏನು ಎಂಬ ಪ್ರಶ್ನೆಗೆ, ‘ನನ್ನದು ಯಾವುದೇ ಡಿಮ್ಯಾಂಡ್ ಇಲ್ಲ. ಬಿಜೆಪಿಯಲ್ಲಿದ್ದೇನೆ. ಇಲ್ಲಿಯೇ ಮುಂದುವರಿಯಲು ಬಯಸುವೇ’ ಎಂದು ಸ್ಪಷ್ಟಪಡಿಸಿದರು.

ರಾಮುಲು–ರೆಡ್ಡಿ ಮುನಿಸಿಗೆ ಕಾರಣವೇನು?

ತಮ್ಮಿಬ್ಬರ ನಡುವಿನ ಮುನಿಸಿಗೆ ಕಾರಣವೇನು ಎಂಬುದನ್ನು ಸ್ವತಃ ಶ್ರೀರಾಮುಲು ಬಯಲು ಮಾಡಿದ್ದಾರೆ. ‘ಕೋರ್ಟ್ ಅವಕಾಶ ನೀಡದ ಮೇರೆಗೆ ಜನಾರ್ದನ ರೆಡ್ಡಿ ಇತ್ತೀಚೆಗೆ ಬಳ್ಳಾರಿಗೆ ಅದ್ಧೂರಿಯಾಗಿ ಪ್ರವೇಶ ಮಾಡಿದ್ದರು. ಆಗ ಬರಮಾಡಿಕೊಂಡಿಲ್ಲ ಎಂಬುದು ಅವರ ಕೋಪ. ಈ ಬಗ್ಗೆ ಮಾಧ್ಯಮಗಳು ಪ್ರಶ್ನೆ ಕೇಳಿದರೆ ‘ರಾಮುಲುಗೆ ಹೇಳಲಾಗದಂಥ ಕಾಯಿಲೆ ಇದೆ ಜನರ ಮಧ್ಯೆ ಬಂದರೆ ಜನರಿಗೆ ತೊಂದರೆಯಾಗುತ್ತದೆ. ಮುಂದಿನ ದಿನದಲ್ಲಿ ಹೇಳುತ್ತೇನೆ’ ಎಂದಿದ್ದರು. ಇದು ನನ್ನನ್ನು ಘಾಸಿಗೊಳಿಸಿತು. ನನ್ನಷ್ಟು ಆರೋಗ್ಯವಾಗಿ ಜನಾರ್ದನ ರೆಡ್ಡಿ ಇದ್ದಾರೆಯೇ? ಅವರು ನನ್ನಂತೆ ಓಡುವರೇ? ಎಂದು ಶ್ರೀರಾಮುಲು ಪ್ರಶ್ನೆ ಮಾಡಿದರು. ಕೂಡ್ಲಿಗಿಯಿಂದಲೇ ಸ್ಪರ್ಧೆ: ‘ಬಳ್ಳಾರಿಯ ಎಲ್ಲ ಕ್ಷೇತ್ರಗಳಲ್ಲೂ ಜನಾರ್ದನ ರೆಡ್ಡಿ ಪಕ್ಷವನ್ನು ಮೂರು ಭಾಗ ಮಾಡಿ ಹಾಕಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕೂಡ್ಲಿಗಿಯಿಂದ ಸ್ಪರ್ಧೆ ಮಾಡಬೇಕೆಂದುಕೊಂಡಿದ್ದೇನೆ. ಕೂಡ್ಲಿಗಿಯಲ್ಲೇ ನಿಲ್ಲುತ್ತೇನೆ. ಅಲ್ಲಿನ ಜನ ನಾನು ಬರಲಿ ಎಂದು ಕಾಯುತ್ತಿದ್ದಾರೆ. ಗೋಡಾ ಹೈ ಮೈದಾನಾ ಹೈ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.