ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋರಣಗಲ್ಲು: ಬಸ್ ಚಕ್ರ ಹರಿದು ಕ್ಲೀನರ್ ಸಾವು

Published 2 ಮಾರ್ಚ್ 2024, 16:17 IST
Last Updated 2 ಮಾರ್ಚ್ 2024, 16:17 IST
ಅಕ್ಷರ ಗಾತ್ರ

ತೋರಣಗಲ್ಲು: ಹೋಬಳಿಯ ಬನ್ನಿಹಟ್ಟಿ ಗ್ರಾಮದ ಬಳಿ ಶುಕ್ರವಾರ ರಾತ್ರಿ ಜಿಂದಾಲ್ ಕಾರ್ಖಾನೆಯ ಬಸ್ ಕ್ಲೀನರ್ ಮೇಲೆ ಹರಿದು ಆತ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಕೃಷ್ಣಾನಗರದ ನಿವಾಸಿ, ಬಸ್‌ನ ಕ್ಲೀನರ್ ಹುಚ್ಚಪ್ಪ(45) ಮೃತ. ಬನ್ನಿಹಟ್ಟಿ ಗ್ರಾಮದ ಬಳಿ ಜಿಂದಾಲ್ ಬಸ್ ರಸ್ತೆಯಲ್ಲಿ ನಿಂತಿದ್ದಾಗ, ಬಸ್ಸಿನಿಂದ ಕೆಳಗಿಳಿದ ಕ್ಲೀನರ್, ಬಸ್‌ನ ಕೆಳಭಾಗವನ್ನು ಇಣುಕಿ ಪರಿಶೀಲಿಸುವಾಗ ಬಸ್ ಏಕಾಏಕಿ ಮುಂದಕ್ಕೆ ಚಲಿಸಿದ್ದರಿಂದ ದುರ್ಘಟನೆ ಸಂಭವಿಸಿದೆ.

‘ಮೃತನ ಸಹೋದರ ಕುಮಾರಸ್ವಾಮಿ ನೀಡಿದ ದೂರು ಅಧರಿಸಿ ಜಿಂದಾಲ್ ಬಸ್ ಸಮೇತ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ತೋರಣಗಲ್ಲು ಠಾಣೆಯ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT