ಬಳ್ಳಾರಿ: ಪರಿಸರ ಸಂರಕ್ಷಣೆ ಮತ್ತು ಅದಕ್ಕಾಗಿ ಅನುಸರಿಸಬೇಕಾದ ಕ್ರಮಗಳು, ಕೈಗೊಳ್ಳಬೇಕಾದ ಸಂಕಲ್ಪ ಕುರಿತು ಚರ್ಚಿಸಲು ಬಳ್ಳಾರಿಯಲ್ಲಿ ಭಾನುವಾರ ಪರಿಸರ ಆಸಕ್ತರ, ಹೋರಾಟಗಾರ ಸಮಾಲೋಚನಾ ಸಭೆ ನಡೆಯಿತು.

‘ಪರಿಸರ ಸಂರಕ್ಷಣೆ: ನಾಗರಿಕರ ಹೊಣೆ’ ವಿಷಯವನ್ನು ಆಧರಿಸಿದ ಚರ್ಚೆಯಲ್ಲಿ ಪರಿಸರ ಹೋರಾಟಗಾರರೂ ಸೇರಿದಂತೆ ವಿವಿಧ ರಂಗಗಳ ಪ್ರಮುಖರು ಭಾಗವಹಿಸಿದ್ದರು.

ಜಪಾನ್ನಲ್ಲಿ ಅತ್ಯಂತ ಜನಪ್ರಿಯವಾಗಿರುವ ‘ನಗರ ಅರಣ್ಯೀಕರಣ’ ಕಲ್ಪನೆಯಾದ ‘ಮಿಯಾವಾಕಿ ಮಾದರಿ’ಯನ್ನು ಜಿಲ್ಲೆಯಲ್ಲಿಯೂ ಹೆಚ್ಚು ಪ್ರಚಲಿತಗೊಳಿಸಲು ಪ್ರಯತ್ನಿಸುವ ಕುರಿತು ಚರ್ಚೆಗಳು ನಡೆದವು.

‘ಸ್ಥಳೀಯ ಸಸ್ಯ ಪ್ರಬೇಧವನ್ನೇ ನೆಟ್ಟು, ಅತ್ಯಂತ ಕಡಿಮೆ ಜಾಗದಲ್ಲಿ ದಟ್ಟವಾದ ಅರಣ್ಯ ಸೃಷ್ಟಿ ಮಾಡುವುದು ಮಿಯಾವಾಕಿ ಮಾದರಿಯಾಗಿದೆ. ಇದನ್ನು ಪ್ರಚಲಿತಗೊಳಿಸದವರು ಜಪಾನ್ನ ಸಸ್ಯಶಾಸ್ತ್ರಜ್ಞ ಅಕಿರ ಮಿಯಾವಾಕಿ. ಪರಿಸರ ಸಂರಕ್ಷಣೆಯಲ್ಲಿ ಇದು ಅತ್ಯಂತ ಯಶಸ್ವಿ ಮಾದರಿ ಎನಿಸಿದೆ‘ ಎಂದು ಡಾ. ಅರವಿಂದ ಪಟೇಲ್ ಮತ್ತು ಪ್ರೊ ಪ್ರಶಾಂತ್ ಎಂಬುವವರು ಪ್ರತಿಪಾದಿಸಿದರು.

‘ನಗರದ ಹೊಸ ಬಡಾವಣೆಗಳಲ್ಲಿ ಮತ್ತು ಲಭ್ಯವಿರುವ ಸ್ಥಳಗಳಲ್ಲಿ ‘ಮಿಯಾವಾಕಿ ಮಾದರಿ’ಯನ್ನು ಪಾಲಿಸಬೇಕು. ಈ ಸಂಬಂಧ ಕಾರ್ಯಪ್ರವೃತ್ತವಾಗಬೇಕು’ ಎಂದು ಹೋರಾಟಗಾರ ಪನ್ನರಾಜು ತಿಳಿಸಿದರು.

ಚರ್ಚೆಯಲ್ಲಿ ಮಾತನಾಡಿದ ಪತ್ರಕರ್ತ ಚಂದ್ರಕಾಂತ ವಡ್ಡು, ನಮಗಾಗಿ ಮತ್ತು ನಮ್ಮ ಮುಂದಿನ ಪೀಳಿಗೆಗಾಗಿ ಪರಿಸರ ಉಳಿಸಿ, ಬೆಳೆಸಬೇಕಾಗಿದೆ. ಹಳೇ ತಲೆಮಾರು ಏನು ಮಾಡಿತ್ತು ಎಂಬುದರ ಚರ್ಚೆಯನ್ನು ಬದಿಗೊತ್ತಿ, ಇಂದು ನಾವೇನು ಮಾಡುತ್ತಿದ್ದೇವೆ ಎಂಬುದನ್ನು ವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಪರಿಸರ ಹಾನಿಯಿಂದ ಇತ್ತೀಚಿನ ದಿನಗಳಲ್ಲಿ ಜನರ ಆರೋಗ್ಯದಲ್ಲಿಆಗುತ್ತಿರುವ ಸಮಸ್ಯೆಗಳ ಕುರಿತು ಆಧ್ಯಯನ ನಡೆಯಬೇಕಾದ ಅಗತ್ಯವಿದೆ’ ಎಂದು ಅವರು ಹೇಳಿದರು.

ಲೋಹಿಯಾ ಪ್ರಕಾಶನದ ಸಂಸ್ಥಾಪಕ ಸಿ.ಚನ್ನಬಸವಣ್ಣ ಸೇರಿದಂತೆ ಹಲವರು ಈ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಆರೋಗ್ಯ ಏರುಪೇರು; ಪರಿಸರ ಹಾನಿಯ ಅಡ್ಡಪರಿಣಾಮ ಸಭೆಯಲ್ಲಿ ಪಾಲ್ಗೊಂಡಿದ್ದ ವೈದ್ಯ ಡಾ.ಅರವಿಂದ ಪಟೇಲ್ ಮಾತನಾಡಿ ‘ಬಳ್ಳಾರಿ ಕೊಪ್ಪಳದಲ್ಲಿ ಅಸ್ತಮಾ ರೋಗದ ಜೊತೆಗೆ ಗ್ಯಾಸ್ಟ್ರೈಟಿಸ್ ಸಮಸ್ಯೆ ವ್ಯಾಪಕವಾಗಿದೆ. ಇದು ಪರಿಸರ ಹಾನಿಯ ಅಡ್ಡಪರಿಣಾಮಗಳಲ್ಲಿ ಒಂದು’ ಎಂದು ಹೇಳಿದರು. ಇದರ ಜತೆಗೆ ಬಂಜೆತನ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿದೆ. ಅತಿ ಚಿಕ್ಕ ವಯಸ್ಸಿನಲ್ಲೇ ಮಕ್ಕಳು ಋತುಮತಿಯಾಗುತ್ತಿದ್ದಾರೆ. ಮೂರ್ನಾಲ್ಕು ದಶಕಗಳ ಹಿಂದೆ ಭಾರತದಲ್ಲಿ ಕ್ಯಾನ್ಸರ್ ಎಂಬುದು ಅಲ್ಲೊಂದು ಇಲ್ಲೊಂದು ಕಾಣಿಸಿಕೊಳ್ಳುತ್ತಿದ್ದ ಕಾಯಿಲೆಯಾಗಿತ್ತು. ಇಂದು ವ್ಯಾಪಕಗೊಳ್ಳುತ್ತಿದೆ. ಇದೆಲ್ಲವೂ ಪರಿಸರ ನಾಶದ ಪರಿಣಾಮಗಳು’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.